ಗುರುವಾರ , ನವೆಂಬರ್ 21, 2019
21 °C

`ಚಾನೆಲ್ 9' ಶೋರೂಂ ಆರಂಭ

Published:
Updated:

ಜಯನಗರ 7ನೇ ಬ್ಲಾಕ್‌ನಲ್ಲಿ ಹೊಸ ಮೊಬೈಲ್ ಶೋರೂಂ ಆರಂಭಿಸಿರುವ `ಚಾನೆಲ್ 9' ಒಂದೇ ಸೂರಿನಡಿ ಮೊಬೈಲ್ ಫೋನ್ ಮತ್ತು ಸಂಬಂಧಿತ ಇತರ ಪರಿಕರಗಳನ್ನು ಗ್ರಾಹಕರಿಗೆ ಒದಗಿಸಲಿದೆ. ಹೊಸ ಶೋರೂಂ ಅನ್ನು ಈಚೆಗೆ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಉದ್ಘಾಟಿಸಿದರು.`ಗ್ರಾಹಕರು ಇಲ್ಲಿ ವೈವಿಧ್ಯಮಯ ಮೊಬೈಲ್‌ಗಳು, ಸಾಧನ ಪರಿಕರಗಳ ಜತೆಗೆ ಉಚಿತ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳು, ಹಾಡುಗಳ ಡೌನ್‌ಲೋಡ್, ಉಚಿತ ಹೋಂ ಡೆಲಿವರಿ ಮತ್ತು ಎಕ್ಸ್‌ಚೇಂಜ್ ಆಯ್ಕೆಗಳ ಮೊದಲಾದ ಸೇವೆಗಳು ಲಭ್ಯವಿದೆ. ಇಲ್ಲಿನ ಟೆಕ್ ಸಪೋರ್ಟ್ ತಂಡವು, ಉತ್ಪನ್ನದ ಅಪ್‌ಗ್ರೇಡ್‌ಗಳು, ಸಾಫ್ಟ್‌ವೇರ್‌ಗಳು ಮತ್ತು ಹಾರ್ಡ್‌ವೇರ್ ಬೆಂಬಲದೊಂದಿಗೆ ಆಪ್ತ ಸೇವೆಯನ್ನು ಒದಗಿಸುತ್ತದೆ' ಎನ್ನುತ್ತಾರೆ `ಚಾನೆಲ್ 9' ಮಾಲೀಕ ಸಂತೋಷ್.

ಪ್ರತಿಕ್ರಿಯಿಸಿ (+)