ಗುರುವಾರ , ಏಪ್ರಿಲ್ 22, 2021
23 °C

ಚಾಪ್ಲಿನ್ ನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾರ್ನ್ ಫ್ರಿ ಆರ್ಟ್ ಸ್ಕೂಲ್: ವಿಶ್ವವಿಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ 122ನೇ ಜನ್ಮದಿನ ನಿಮಿತ್ತ//ಶನಿವಾರ ಬೆಳಿಗ್ಗೆ 10ರಿಂದ 11 ಗಂಟೆವರೆಗೆ ಹನುಮಂತನಗರದ ಕೆ ಎಚ್ ಕಲಾಸೌಧ ಮತ್ತು  ಭಾನುವಾರ ಸಂಜೆ 4.30ರಿಂದ 5.30ರವರೆಗೆ ವಸಂತನಗರದ ಅಲಯನ್ಸ್ ಫ್ರಾನ್ಸೆಯಲ್ಲಿ ಕಾರ್ಯಕ್ರಮ.  ಚಾಪ್ಲಿನ್ ಚಲನಚಿತ್ರ, ಮೂಕಾಭಿನಯ ಮತ್ತು ನೃತ್ಯ ಮಿಶ್ರಿತವಾದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಬಾರ್ನ್ ಫ್ರಿ ಸಂಸ್ಥಾಪಕ ಜಾನ್ ದೇವರಾಜ್ ಮತ್ತು ಹಲವು ಬೀದಿ ಮಕ್ಕಳು ಅಭಿನಯಿಸಲಿದ್ದಾರೆ.ಚಾಪ್ಲಿನ್ ಚಿತ್ರಗಳ ತುಣುಕು, ಚಾಪ್ಲಿನ್ ಸಂಯೋಜಿಸಿದ್ದ, ಮೈಕಲ್ ಜಾಕ್ಸನ್ ಹಾಡಿದ್ದ ಸ್ಮೈಲ್ ಸಾಂಗ್, ಚಾಪ್ಲಿನ್ ಇನ್ ದಿ ಬಾಕ್ಸಿಂಗ್ ರಿಂಗ್, ದಿ ಕಿಡ್, ಚಾಪ್ಲಿನ್ ಡಾನ್ಸಸ್ ಇನ್ ದಿ ಹೋಟೆಲ್ ಇತ್ಯಾದಿ ಚಿತ್ರಗಳ ಮೂಕಾಭಿನಯ ಪ್ರದರ್ಶನಗೊಳ್ಳಲಿದೆ.ನಂತರ ಚಾಪ್ಲಿನ್ ಚಿತ್ರಗಳ ಮಾದರಿಯಲ್ಲಿ ಜಾನ್ ದೇವರಾಜ್ ನಿರ್ದೇಶಿಸಿರುವ ‘ಚೆ ಚೆ’ ಸರಣಿಯ ಎರಡು ಚಿತ್ರಗಳು. ಹೋಟೆಲ್ ಕಾರ್ಮಿಕರ ಕುರಿತಾದ ‘ದಿ ಬೊಂಡಾ ಬಾಯ್’, ಮನೆಗೆಲಸದವರ ಕುರಿತಾದ ‘ಮನೆ ಭೂತ’. ಈ ಎರಡೂ ಚಿತ್ರಗಳಲ್ಲಿ ಬಾಲ ಕಾರ್ಮಿಕರಾಗಿದ್ದ ಮಕ್ಕಳು ಅಭಿನಯಿಸಿರುವುದು ವಿಶೇಷ. ಮಾಹಿತಿಗೆ: 98863 06366

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.