ಚಾಮರಾಜನಗರ ಜಿಲ್ಲೆಯಲ್ಲಿ ಮಳೆ: ಅರಿಶಿಣ ಬೆಳೆಗಾರರು ಕಂಗಾಲು

7

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ: ಅರಿಶಿಣ ಬೆಳೆಗಾರರು ಕಂಗಾಲು

Published:
Updated:

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಶನಿವಾರ ಸುಮಾರು ಮುಕ್ಕಾಲು ಗಂಟೆ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ಕೆಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆಯಿತು.ಆದರೆ, ಅಕಾಲಿಕ ಮಳೆಯಿಂದ ಅರಿಶಿಣ  ಬೆಳೆಗಾರರು ಕಂಗಾಲಾಗಿದ್ದಾರೆ. ಪ್ರಸ್ತುತ ಬೆಳೆಗಾರರು ಅರಿಶಿಣ ಕಾಟಾವು ಮಾಡಿ ಬೇಯಿಸುತ್ತಿದ್ದಾರೆ. ಅದನ್ನು ಚೆನ್ನಾಗಿ ಒಣಗಿಸಿದ ಬಳಿಕ ಸಂಸ್ಕರಣೆ ಮಾಡಬೇಕಿದೆ. ಆದರೆ, ಏಕಾಏಕಿ ಮಳೆ ಸುರಿಯುತ್ತಿರುವ ಪರಿಣಾಮ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಮಳೆ ಸಿಲುಕಿ ಅರಿಶಿಣ ಕೊಳೆಯುತ್ತದೆ ಎಂಬ ಆತಂಕ ಎದುರಾಗಿದೆ.ಗ್ರಾಮೀಣ ಪ್ರದೇಶದ ಇಟ್ಟಿಗೆ ತಯಾರಕರಿಗೂ ಮಳೆ ಸಂಕಷ್ಟ ತಂದಿದೆ. ಈರುಳ್ಳಿ ಹಾಗೂ ಹುಣಿಸೆ ಹಣ್ಣು ಕೊಯ್ಲು ಮಾಡುತ್ತಿರುವ ರೈತರು ಸಹ ತೊಂದರೆ ಅನುಭವಿಸುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry