ಸೋಮವಾರ, ಮೇ 10, 2021
21 °C

ಚಾರ್ ಧಾಮ್ ಯಾತ್ರೆ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಅಭಿವೃದ್ಧಿಹೊಂದುತ್ತಿರುವ ಉತ್ತರಾಖಂಡದ ಧಾರ್ಮಿಕ ಪ್ರವಾಸೋದ್ಯಮದ ಬೆನ್ನೆಲುಬು ಎಂದೇ ಪ್ರಸಿದ್ಧವಾಗಿರುವ `ಚಾರ್ ಧಾಮ್ ಯಾತ್ರೆ~ ಇದೇ ತಿಂಗಳ 24ರಿಂದ ಪ್ರಾರಂಭವಾಗಲಿದೆ.ಹಿಂದೂಗಳ ಪುಣ್ಯಕ್ಷೇತ್ರವಾಗಿರುವ ಬದರಿನಾಥ, ಕೇದಾರನಾಥ, ಯಮುನೋತ್ರಿ ಹಾಗೂ ಗಂಗೋತ್ರಿಗೆ ಈ ಸಂದರ್ಭದಲ್ಲಿ ಭಕ್ತ ಸಾಗರ ಹರಿದುಬರಲಿರುವ ಹಿನ್ನೆಲೆಯಲ್ಲಿ ಏ. 24 ರಂದು ಯಮುನೋತ್ರಿ, ಗಂಗೋತ್ರಿ, ಏ.28 ರಂದು ಬದರಿನಾಥ, ಏ.29 ರಂದು ಕೇದಾರನಾಥ ದೇವಸ್ಥಾನಗಳನ್ನು ತೆರೆದು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಬದರಿನಾಥ ಹಾಗೂ ಕೇದಾರನಾಥ ದೇವಸ್ಥಾನ ಮಂಡಳಿ ಅಧ್ಯಕ್ಷ ಅನುಸುವಾ ಪ್ರಸಾದ ಭಟ್ ವರದಿಗಾರರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.