ಗುರುವಾರ , ಮಾರ್ಚ್ 4, 2021
19 °C

ಚಾಲಕನಿಲ್ಲದ ಮೊದಲ ಮೆಟ್ರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಲಕನಿಲ್ಲದ ಮೊದಲ ಮೆಟ್ರೊ

ನವದೆಹಲಿ(ಐಎಎನ್‌ಎಸ್‌): ಚಾಲಕ ನಿಲ್ಲದ ಮೊದಲ ಮೆಟ್ರೊ ರೈಲು ಗುರುವಾರ ದೆಹಲಿ ಮೆಟ್ರೊಗೆ ಹೊಸದಾಗಿ ಸೇರ್ಪಡೆಯಾಗಿದೆ .

ದಕ್ಷಿಣ ಕೊರಿಯಾದ ಚಂಗ್ವಾನ್‌ನಲ್ಲಿ ರೂಪಿಸಲಾದ ಈ ಆಧುನಿಕ  ರೈಲು, ಇಲ್ಲಿನ ಮುಕುಂದಪುರ ಡಿಪೋಗೆ ಬಂದಿದ್ದು ದೆಹಲಿ ಮೆಟ್ರೊ ನಿಯಂತ್ರಣಾ ಕೇಂದ್ರದ ಮಾರ್ಗದರ್ಶನದಲ್ಲಿ ಮೊದಲ ಪರೀಕ್ಷಾರ್ಥ ಚಾಲನೆ ಮಾಡಲಾಯಿತು.ಮೆಟ್ರೊದ 3ನೇ ಹಂತದ ಯೋಜನೆಯ ಕೆಲವು ಮಾರ್ಗಗಳಲ್ಲಿ ಮುಂದಿನ ವರ್ಷದ ಕೊನೆ ವೇಳೆಗೆ ಈ ರೈಲು ಸಂಚಾರ ಆರಂಭಿಸಲಿದೆ.

ಮೆಟ್ರೊ ರೈಲು ಹಡಗಿನ ಮೂಲಕ ಗುಜರಾತ್‌ನ ಮುಂದ್ರಾ ಕರಾವಳಿಗೆ ಬಂದಿದ್ದು ಅಲ್ಲಿಂದ ದೆಹಲಿಗೆ ರಸ್ತೆ  ಮಾರ್ಗದ ಮೂಲಕ ತರಲಾಗಿದೆ.‘ಮಜ್ಲೀಶ್‌ ಪಾರ್ಕ್‌– ಶಿವ ವಿಹಾರ್‌ (ಮಾರ್ಗ 7–58.596 ಕಿ.ಮೀ) ಹಾಗೂ ಜನಕ್‌ಪುರಿ ಪಶ್ಚಿಮ– ಬೊಟಾನಿಕಲ್‌ ಗಾರ್ಡನ್‌ (ಮಾರ್ಗ 8–38.235 ಕಿಮೀ) ಮಾರ್ಗಗಳಲ್ಲಿ ಈ ರೈಲು ಚಲಿಸಲಿದೆ’ ಎಂದು ದೆಹಲಿ ಮೆಟ್ರೊ ತಿಳಿಸಿದೆ.ಈ ಎರಡು ಮಾರ್ಗಗಳೂ  2016ರ ಅಂತ್ಯದೊಳಗೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟು 20 ಬೋಗಿಗಳಲ್ಲಿ ಆರು ಬೋಗಿಗಳನ್ನು ಈ ವರ್ಷದ ಅಂತ್ಯದೊಳಗೆ ದಕ್ಷಿಣ ಕೊರಿಯಾದಲ್ಲಿ ತಯಾರಿಸಲಾಗುತ್ತದೆ. ಹಾಗೆಯೇ 61 ಬೋಗಿಗಳನ್ನು ಬೆಂಗಳೂರಿನ ಭಾರತ್‌ ಅರ್ಥ್‌‌ ಮೂವರ್ಸ್‌ ಲಿಮಿಟೆಡ್‌ (ಬಿಎಎಂಎಲ್‌)ನಲ್ಲಿ ತಯಾರಿಸಲಾಗುತ್ತದೆ.ಪ್ರತಿಯೊಂದು ರೈಲಿನಲ್ಲಿ  2,280 ಪ್ರಯಾಣಿಕರು ಒಂದೇ ಬಾರಿ ಪ್ರಯಾಣಿಸಬಹುದಾಗಿದ್ದು, ಚಾಲಕನ ಕೋಣೆಯನ್ನು  ಈ ಮೆಟ್ರೊ ಹೊಂದಿರುವುದಿಲ್ಲ.ಭದ್ರತೆಯ ಹಿತದೃಷ್ಟಿಯಿಂದ ಸಿಸಿ  ಟಿವಿ ಕ್ಯಾಮೆರಾವನ್ನು ರೈಲಿನ ಒಳಗೆ ಹಾಗೂ ಹೊರಗೆ ಅಳವಡಿಸಲಾಗಿದ್ದು, ಚಿತ್ರಗಳನ್ನು ನೇರವಾಗಿ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಿಸಬಹುದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.