ಚಾಲಕನ ಚಾತುರ್ಯ: ಸರ್ಕಾರಿ ಬಸ್ ಬಚಾವ್

7

ಚಾಲಕನ ಚಾತುರ್ಯ: ಸರ್ಕಾರಿ ಬಸ್ ಬಚಾವ್

Published:
Updated:

ಮುಧೋಳ: ಜಮಖಂಡಿಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಪಟ್ಟಣದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ  ವೇಗವಾಗಿ ಬಂದ ಬೈಕ್ ಸವಾರ ಬಸ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ಸು ಇನ್ನೇನು ಕಂದಕಕ್ಕೆ ಬೀಳುವಷ್ಟರಲ್ಲಿ ಚಾಲಕನ ಸಮಯ ಪ್ರಜ್ಞೆ ಹಾಗೂ ಕೈ ಚಳಕದಿಂದ ಬೈಕ್ ಸವಾರ ಹಾಗೂ ಬಸ್‌ನಲ್ಲಿದ್ದ 30ಕ್ಕೂ ಅಧಿಕ ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ಸಂಜೆ ನಡೆದಿದೆ.ಆತನನ್ನು ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು  ಬಸ್ ಚಾಲಕ ತನ್ನ ಜಾಣತನದಿಂದ ಬಸ್‌ನ್ನು ಪಕ್ಕ ದಲ್ಲಿದ್ದ ಹಳ್ಳಕ್ಕೆ ಬೀಳುವುದನ್ನು ತಪ್ಪಿಸಿ ಹಲವರ ಪ್ರಾಣ ರಕ್ಷಣೆ ಮಾಡಿದ್ದಾನೆ.ಬಸ್‌ನಲ್ಲಿದ್ದ ಪ್ರಯಾಣಿಕರು ಎದುರಿಗೆ ಬರುತ್ತಿದ್ದ ಬೈಕ್ ಸವಾರನಿಗೆ ಮಹಿಳೆಯರೇ ಥಳಿಸಿದರು. ನಂತರ ಬಸ್ ಚಾಲಕ, ನಿರ್ವಾಹಕ ಹಾಗೂ ಕೆಲ ಪ್ರಯಾಣಿಕರು ಸೇರಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry