ಚಾಲೆಂಜರ್‌ ಟ್ರೋಫಿಗೆ ಇರ್ಫಾನ್‌ ಅಲಭ್ಯ

7

ಚಾಲೆಂಜರ್‌ ಟ್ರೋಫಿಗೆ ಇರ್ಫಾನ್‌ ಅಲಭ್ಯ

Published:
Updated:

ನವದೆಹಲಿ (ಪಿಟಿಐ): ಗಾಯ­ಗೊಂಡಿರುವ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರು ಮುಂಬರುವ ಎನ್‌ಕೆಪಿ ಸಾಳ್ವೆ ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.ಈ ಮೊದಲು ಪ್ರಕಟಿಸಲಾಗಿದ್ದ  ಇಂಡಿಯಾ ತಂಡದಲ್ಲಿ ಇರ್ಫಾನ್‌ ಸ್ಥಾನ ಪಡೆದಿದ್ದರು. ಈಗ ಅವರ ಬದಲಿಗೆ ಕೇರಳದ ಮಧ್ಯಮ ವೇಗದ ಬೌಲರ್‌ ಸಂದೀಪ್‌ ವಾರಿಯರ್‌ ಸ್ಥಾನ ಪಡೆದಿದ್ದಾರೆ. ರೆಡ್‌ ಇಂಡಿಯಾ ತಂಡವನ್ನು ಯೂಸುಫ್‌ ಪಠಾಣ್‌ ಮುನ್ನಡೆಸಲಿದ್ದಾರೆ.ಆರು ವಾರ ಕಾಲ ಇರ್ಫಾನ್‌ ಲಭ್ಯರಿರುವುದಿಲ್ಲ. ಚಾಲೆಂಜರ್‌ ಟ್ರೋಫಿ ಸೆಪ್ಟೆಂಬರ್‌ 26ರಿಂದ 29ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಇಂಡಿಯಾ ರೆಡ್‌, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್‌ ತಂಡಗಳು ಪೈಪೋಟಿ    ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry