ಚಿಂಚಲಿ ಶಕ್ತಿ ದೇವತೆ ಮಾಯಕ್ಕಾ ದೇವಿ ಜಾತ್ರೆ ಇಂದಿನಿಂದ

7

ಚಿಂಚಲಿ ಶಕ್ತಿ ದೇವತೆ ಮಾಯಕ್ಕಾ ದೇವಿ ಜಾತ್ರೆ ಇಂದಿನಿಂದ

Published:
Updated:

ರಾಯಬಾಗ: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರ ಭಾಗದ ಪ್ರಮುಖ ಉತ್ಸವ, ಚಿಂಚಲಿ ಮಾಯಕ್ಕಾ ದೇವಿಯ ಜಾತ್ರೆ ಇದೇ 7ರಿಂದ 15ರವರೆಗೆ ನಡೆಯಲಿದೆ.ಭಾರತ ಹುಣ್ಣಿಮೆಯ ನಂತರ ಬರುವ ಹಸ್ತಾ ನಕ್ಷತ್ರದ ಶುಭಗಳಿಗೆ ಯಲ್ಲಿ  ದೇವಿಯ ಮಹಾನೈವೇದ್ಯ ಹಾಗೂ ಪಲ್ಲಕ್ಕಿ ಉತ್ಸವ ಜರುಗುವುದು.ಮಾಯಕ್ಕಾ ದೇವಿ ದೇವಸ್ಥಾನವಿರುವು ದರಿಂದ  ಗ್ರಾಮ ಮಾಯಕ್ಕನ ಚಿಂಚಲಿ ಎಂದೇ ಪ್ರಸಿದ್ಧವಾಗಿದೆ. ರಾಜ್ಯ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ಆಂಧ್ರ, ದೆಹಲಿ, ಚನೈ ಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.ದೇವಿಗೆ ಎಲ್ಲಾ ಕೋಮು ಹಾಗೂ ಜಾತಿಯ ಜನರು ನಡೆದುಕೊಳ್ಳುತ್ತಾ ರಾದರೂ  ಕುರುಬ  ಸಮಾಜದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಾರೆ.ದೇವಿಯನ್ನು ಶಕ್ತಿ ದೇವತೆ, ಪಾರ್ವತಿಯ ಅವತಾರಎಂದೂ ಭಕ್ತರು ನಂಬುತ್ತಾರೆ. ದೇವಿಯ ಮೂಲ ಸ್ಥಳ, ಸ್ಥಳಾಂತರ ಇತ್ಯಾದಿಗಳ ಹಲವು ಕತೆಗಳಿವೆ. ದೇವಿಯು ಮಹಾರಾಷ್ಟ್ರದ ಮಾನ ದೇಶ (ಕೊಂಕಣ)ದಿಂದ ಬಂದವಳು. ಕೀಲ ಕಿಟ್ಟ ರಾಕ್ಷಸರನ್ನು ಬೆನ್ನಟ್ಟಿಕೊಂಡು ಬಂದು ಸಂಹಾರ ಮಾಡಿ ಇಲ್ಲಿ ನೆಲೆ ನಿಂತಳು  ಎನ್ನುವುದು ಮಾಯಕ್ಕ ದೇವಿ ಬಗೆಗಿರುವ ಕತೆ.ಜಾತ್ರೆಯ ಸಮಯದಲ್ಲಿ ಭಕ್ತರು ಮೈಮೇಲೆ ದೇವಿ ಆವಾಹನೆಯಾಗಿದ್ದಾಳೆ ಎಂದು ಕುಣಿಯುವ ದೃಶ್ಯ ಸಾಮಾನ್ಯ. ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ `ಚಾಂಗಭಲೋ~ `ಹೋಕಭಲೋ~ ಎಂದು ಗಂಡು ಹೆಣ್ಣು ಎಂಬ ಭೇದ ಭಾವ ಇಲ್ಲದೆ ಡೊಳ್ಳಿನ ನಾದಕ್ಕೆ ತಕ್ಕಂತೆ ಕುಣಿಯು ತ್ತಾರೆ.ಇವರನ್ನು ಮಾಯಕ್ಕನ ಅವತಾರ ಎಂದು ಜನರು ನಂಬುತ್ತಾರೆ.ಗ್ರಾಮದ ಹಿರಿಯರ ಪ್ರಕಾರ ಚಿಂಚಲಿಯಲ್ಲಿ ಹಿರಿದೇವಿ ಮೂಲ ದೇವತೆ. ಮಾಯಕ್ಕಾದೇವಿಯು ಹಿರಿದೇವಿಯ ಆಶ್ರಯ ಪಡೆದು ಇಲ್ಲಿ ನೆಲೆಸಿದಳು. ಅದಕ್ಕಾಗಿ ಈ ಗಲೂ ದೇವಸ್ಥಾನದಲ್ಲಿ ಮೊದಲು ಹಿರಿ ದೇವಿಯ ದರ್ಶನಕ್ಕಾಗಿ ನೈವೇದ್ಯ ಸಲ್ಲಿಸಿದ ನಂತರ ಮಾಯಕ್ಕದೇವಿಗೆ ನೈವೇದ್ಯ ಸಲ್ಲುತ್ತದೆ.ದೇವಿಯ ಮೂರ್ತಿ ಅತೀ ಆಕರ್ಷಕವಾಗಿದ್ದು ತಲೆಯ ಮೇಲೆ ಬಂಗಾರದಕಿರೀಟ, ಅದರ ಮೇಲೆ ಐದು ಹೆಡೆಯ ಸರ್ಪ, ನಾಲ್ಕು ಕೈ ತುಂಬ ಬಂಗಾರದ ಬಳೆ, ಒಡವೆಗಳು. ಬಲಗೈಯ್ಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ತ್ರಿಶೂಲ ಹಾಗೂ ಹಾವುಸಿವೆ. ಆದ್ದರಿಂದ ಮಾಯಕ್ಕಾ ದೇವಿಯನ್ನು ಮಾಯವ್ವ, ಮಾಯಕ್ಕ, ಮಾಯಮ್ಮ, ಮಾಯಕಾರತಿ,  ಮಹಾಕಾಳಿ, ಮಾಯಿ ಎಂದೆಲ್ಲಾ ಕರೆಯುತ್ತಾರೆ.ಜಾತ್ರೆಯ ಅಂಗವಾಗಿ ಭಾರಿ ಪ್ರಮಾಣದಲ್ಲಿ ಜಾನುವಾರಗಳ ಜಾತ್ರೆ ನಡೆಯಲಿದೆ.

ದಾಖಲೆ ಪ್ರಕಾರ 1881ರಿಂದ ಈ ಜಾತ್ರೆ ವಿಶೇಷ ಪ್ರಸಿದ್ಧಿ ಪಡೆದಿದ್ದು ಆಗ ಜಾತ್ರೆ ಯಲ್ಲಿ 60ಸಾವಿರ  ಜಾನುವಾರಗಳ ಮಾರಾಟದ ಬಗ್ಗೆ ಮುಂಬೈ ಇಲಾಖೆಗೆ ಸೇರಿದ ಕರ್ನಾಟಕ ಭಾಗದ ಗೆಜೆಟಿಯರ್ ಮೂಲಕ ತಿಳಿಯಹುದಾಗಿದೆ.ಜಾತ್ರೆಗೆ ಆಗಮಿಸುವ ಭಕ್ತರ ಹಿತದೃಷ್ಟಿಯಿಂದ ದೇವಸ್ಥಾನ ಟ್ರಸ್ಟ್ ಕುಡಿಯುವ ನೀರು, ಬೀದಿ ದೀಪ, ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry