ಶನಿವಾರ, ಮೇ 15, 2021
24 °C

ಚಿಂಚೋಳಿ:ಬಸವಣ್ಣ ಮಹಾನ್ ತತ್ವಜ್ಞಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಸಮಾಜೋಧಾರ್ಮಿಕ ಚಳುವಳಿಯ ನೇತಾರ, ಸಮಾನತೆಯ ಹರಿಕಾರ ಜಗಜ್ಜ್ಯೋತಿ ಬಸವೇಶ್ವರರವರು ಜಗತ್ತಿನ ಮಹಾನ್ ತತ್ವಜ್ಞಾನಿ ಎಂದು ಬೀದರಿನ ನ್ಯಾಯವಾದಿ ಬಸವಕುಮಾರ ಪಾಟೀಲ ಬಣ್ಣಿಸಿದರು.ಮಂಗಳವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಜಗಜ್ಜ್ಯೋತಿ ಬಸವೇಶ್ವರರವರ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.ಕಮಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕಲ್ಯಾಣರಾವ್ ಪಾಟೀಲ ಮಾತನಾಡಿ ಬುದ್ದ, ಬಸವ ಅಂಬೇಡ್ಕರ್ ಹಾಗೂ ಸರ್ವ ಶರಣರ ಆದರ್ಶ ಒಂದೇ ಆಗಿವೆ. ಆದರೆ ಅವರ ಅನುಯಾಯಿಗಳೆಂದು ಹೇಳಿಕೊಳ್ಳುವವರು ಅವರ ಆದರ್ಶ ಪಾಲಿಸುತ್ತಿಲ್ಲ. ನಡೆ ಒಂದು ನುಡಿ ಒಂದು ಎನ್ನುವಂತಾಗಿದೆ.

ಇದರಿಂದ ನಾವು ಬೌದ್ದಿಕ ದಿವಾಳಿಯ ಜತೆಗೆ ಆರ್ಥಿಕ ಸಾಮಾಜಿಕವಾಗಿಯೂ ಅವಸಾನ ಹೊಂದುತ್ತಿದ್ದೇವೆ ಎಂದು ವಿಷಾದಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸುನೀಲ ವಲ್ಯ್‌ಪುರ ಮಾತನಾಡಿದರು. ನೀಲಾಂಬಿಕಾ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಶಕುಂತಲಾ ಹುಲಿ ಮಾತನಾಡಿ ಮಹಿಳೆಯರು ಹಮ್ಮಿಕೊಂಡ ಸ್ತಬ್ದಚಿತ್ರ ಮೆರವಣಿಗೆಗೆ ಬಂದೋಬಸ್ತ್ ಕಲ್ಪಿಸಲು ಮನವಿ ಮಾಡಿದರೂ ಸ್ಪಂದಿಸದ ಪೊಲೀಸರ ವಿರುದ್ಧ ಹರಿ ಹಾಯ್ದರು.ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮರಾವ್ ಪಾಟೀಲ್, ಉಪಾಧ್ಯಕ್ಷೆ ಅನುಸೂಯಾ ಪ್ರೇಮಸಿಂಗ್ ಚವ್ಹಾಣ, ಮಾಜಿ ಸಚಿವ ವೈಜನಾಥ ಪಾಟೀಲ, ಬಾಬುರಾವ್ ಚವ್ಹಾಣ, ಶರಣಗೌಡ, ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ ಪೋಲಕಪಳ್ಳಿ, ರಮೇಶ ಸೀಳಿನ್, ಡಿವೈಎಸ್ಪಿ ಬಾಲಚಂದ್ರ ದೊಡ್ಮನಿ ಮುಂತಾದವರು ಇದ್ದರು. ಅಬ್ದುಲ್ ಬಾಷೀತ್ ಅಧ್ಯಕ್ಷತೆ ವಹಿಸಿದ್ದರು,ಶಿವಲೀಲಾ ಮತ್ತು ವಿಜಯಲಕ್ಷ್ಮೀ ನೇಪೇರಿ ಪ್ರಾರ್ಥಿಸಿದರು. ತಹಸೀಲ್ದಾರ ಡಾ. ರಮೇಶಬಾಬು ಹಾಲು ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರು, ಶಾಂತವೀರ ಹೀರಾಪುರ ನಿರೂಪಿಸಿದರು. ಹಾರಕೂಡ ಚನ್ನಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಅಲ್ಲಮಪ್ರಭು, ಬಸವೇಶ್ವರ, ಅಕ್ಕಮಹಾದೇವಿ, ಮುಂತಾದ ಶರಣರ ವೇಷಧರಿಸಿ ಗಮನ ಸೆಳೆದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.