ಚಿಂಚೋಳಿಯಲ್ಲಿ ಸಾಮೂಹಿಕ ವಿವಾಹ,

7

ಚಿಂಚೋಳಿಯಲ್ಲಿ ಸಾಮೂಹಿಕ ವಿವಾಹ,

Published:
Updated:
ಚಿಂಚೋಳಿಯಲ್ಲಿ ಸಾಮೂಹಿಕ ವಿವಾಹ,

ಚಿಂಚೋಳಿ: ಸ್ಥಳೀಯ ಶಾಸಕ ಸುನೀಲ ವಲ್ಯ್‌ಪುರ ಪಟ್ಟಣದಲ್ಲಿ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತಗುಲುತ್ತಿರುವ ಖರ್ಚುಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಕೋಡ್ಲಿ ಕ್ರಾಸ್‌ನಲ್ಲಿ ಕೆಲಹೊತ್ತು ರಸ್ತೆತಡೆ ನಡೆಸಿ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು, 2010-11ನೇ ಸಾಲಿನ ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಕೋಡ್ಲಿ ಕ್ರಾಸ್‌ನಿಂದ ಕೋಡ್ಲಿ ಗೇಟ್‌ವರೆಗಿನ ರಸ್ತೆ ನಿರ್ಮಿಸದೇ ರೂ.5 ಲಕ್ಷ ಅನುದಾನ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಸಾಮಾಜಿಕ ಭದ್ರತಾ ಯೋಜನೆಯ ವಿವಿಧ ವಾಸಾಶನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು, ಕೋಡ್ಲಿ ಅಲ್ಲಾಪುರ ಗ್ರಾಮಗಳಲ್ಲಿ ಕೈಗೊಂಡ ಸಣ್ಣ ನೀರಾವರಿ ಲಾಖೆ ಕಳಪೆ ಕಾಮಗಾರಿ ತನಿಖೆ ಮಾಡುವುದು ಸೇರಿದಂತೆ ವಿವಿಧ 10 ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ ಡಾ. ರಮೇಶಬಾಬು ಹಾಲು ಸ್ವೀಕರಿಸಿದರು.ಹೋರಾಟದ ನೇತೃತ್ವವನ್ನು ಭರತ್ ಬುಳ್ಳಾ, ಮಹೇಂದ್ರ ರಾಮತೀರ್ಥಕರ್, ಮಲ್ಲಿಕಾರ್ಜುನ ಹರವಾಳ, ಅಶೋಕ ರಂಗನೂರು, ಅನುರಾಜ ಬುಗಡಿಕರ್, ಮಲ್ಲಪ್ಪ ಚಿಂತಕುಂಟಾ, ಶ್ರೀಮಂತ ಮಾದೇಶಿ, ನಾಗರಾಜ ಚಕ್ರವರ್ತಿ, ರೇವಣಸಿದ್ದಪ್ಪ ಶೇರಿ, ಗೌತಮ ಬೊಮ್ಮನಳ್ಳಿ, ಪಾಂಡುರಂಗ ಲೊಡ್ಡನೋರ್ ಮತ್ತಿತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry