ಚಿಂಚೋಳಿಯಲ್ಲಿ 14 ಸೆಂ.ಮೀ ಮಳೆ

7

ಚಿಂಚೋಳಿಯಲ್ಲಿ 14 ಸೆಂ.ಮೀ ಮಳೆ

Published:
Updated:

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.ಚಿಂಚೋಳಿಯಲ್ಲಿ 14 ಸೆಂ.ಮೀ. ಮಳೆ ಯಾಗಿದೆ. ಗಂಗಾಪುರ 13, ಆಗುಂಬೆ 12, ಗೋಕರ್ಣ11, ಝಳಕಿ 10, ನೆಲೋಗಿ 9, ಯಲ್ಲಾಪುರ, ಜೋಯಿಡಾ 8, ಕುಂದಾಪುರ, ಕಮ್ಮ­ರಡಿ, ಕೊಪ್ಪ 7, ಕೋಟ, ಕೊಲ್ಲೂರು, ಸಿದ್ದಾಪುರ, ಕದ್ರಾ, ದೇವದುರ್ಗ, ತ್ಯಾಗರ್ತಿ 6,  ಕಾರವಾರ, ಶೃಂಗೇರಿ, ಕೊಟ್ಟಿಗೆ ಹಾರ 5, ಬೆಳ್ತಂಗಡಿ, ಕಾರ್ಕಳ, ಮಂಚಿ ಕೇರಿ, ಹಳಿ­ಯಾಳ, ಚಿತ್ತಾಪುರ, ನಾಲ ವಾರ, ಸೇಡಂ, ಸುರಪುರ, ಶಹಾ ಪುರ, ಲಿಂಗ­ನ­­ಮಕ್ಕಿ, ತಾಳಗುಪ್ಪ, ತೀರ್ಥಹಳ್ಳಿ 4 ಸೆಂ.ಮೀ. ಮಳೆಯಾಗಿದೆ.ಮುನ್ಸೂಚನೆ : ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶ ಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry