ಚಿಂಚೋಳಿ: ಮಕ್ಕಳ ಗಣತಿಗೆ 24 ತಂಡ ರಚನೆ

7
ನಾಳೆಯಿಂದ ವಿಕಲ ಚೇತನರ ಗಣತಿ....

ಚಿಂಚೋಳಿ: ಮಕ್ಕಳ ಗಣತಿಗೆ 24 ತಂಡ ರಚನೆ

Published:
Updated:

ಚಿಂಚೋಳಿ; ತಾಲ್ಲೂಕಿನಲ್ಲಿ ಶಾಲೆಗೆ ದಾಖಲಾಗದ ಹಾಗೂ ಮಧ್ಯದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲು ವಿಶೇಷ ಮಕ್ಕಳ ಗಣತಿ ಸೋಮವಾರ ಪ್ರಾರಂಭವಾಗಿದೆ.ಗಣತಿ ಕಾರ್ಯಕ್ಕೆ ಇಬ್ಬರು ಶಿಕ್ಷಕರು, ಒಬ್ಬ ಅಂಗನವಾಡಿ ಕಾರ್ಯಕರ್ತೆ ಒಳಗೊಂಡ ಮೂವರು ಸದಸ್ಯರ 24 ತಂಡಗಳನ್ನು ರಚಿಸಲಾಗಿದೆ ಎಂದು ಬಿಇಒ ಎಚ್.ಎಸ್. ನಾಟಿಕಾರ್ ಹಾಗೂ ಬಿಆರ್‌ಸಿ ಸಮನ್ವಯಾಧಿಕಾರಿ ವೀರಣ್ಣ ಬೊಮ್ಮನಳ್ಳಿ ತಿಳಿಸಿದರು.ಸೋಮವಾರ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಂದಾಪುರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಗಣತಿ ತಂಡ ಆಗಮಿಸಿದಾಗ, ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳಿಬ್ಬರೂ ಗಣತಿ ಕಾರ್ಯ ಪರಿಶೀಲಿಸಿದರು.

ಶಾಲೆಗೆ ದಾಖಲಾಗದ ಹಾಗೂ ಸತತ 2 ತಿಂಗಳು ಗೈರಾಗಿರುವ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಗು ಎಂದು ಪರಿಗಣಿಸಲಾಗುತ್ತಿದ್ದು, ಡಿಸೆಂಬರ್ 15ವರೆಗೆ ಗಣತಿ ನಡೆಯಲಿದೆ ಎಂದರು.ಮಕ್ಕಳ ಗಣತಿಯ ಪ್ರತಿತಂಡಕ್ಕೆ 18 ಶಾಲೆಗಳನ್ನು ಸಂದರ್ಶಿಸಿ ಗಣತಿ ನಡೆಸಲು ಸೂಚಿಸಲಾಗಿದೆ. ಪ್ರತಿದಿನ ಮೂರು ಶಾಲೆಗಳಂತೆ ಗಣತಿದಾರರು ಆರು ದಿನಗಳ ಕಾಲ ಗಣತಿ ನಡೆಸಲಿದ್ದಾರೆ ಎಂದರು.ಇವುಗಳನ್ನು ಆಧರಿಸಿ ಗಣತಿಯಲ್ಲಿ ಪತ್ತೆಯಾದ ಮಕ್ಕಳಿಗೆ ತಕ್ಷಣದಿಂದಲೇ ಹತ್ತಿರದ ವಸತಿ ನಿಲಯದಲ್ಲಿ ಪ್ರವೇಶ ಕೊಡಿಸಲಾಗುವುದು ಎಂದರು.2010ರ ಸಮಗ್ರ ಮಕ್ಕಳ ಗಣತಿ ಆಧರಿಸಿ ನಡೆಸುತ್ತಿರುವ ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿಯಲ್ಲಿ 6ರಿಂದ 14 ವರ್ಷ ವಯಸ್ಸಿನ ಹಾಗೂ 2ನೇ ತರಗತಿಯಿಂದ 8ನೇ ತರಗತಿ ಅಭ್ಯಾಸ ಮಾಡುವ ಮಕ್ಕಳನ್ನು ಪರಿಗಣಿಸಲಾಗುತ್ತಿದೆ ಎಂದರು.ಮುಖ್ಯಗುರು ರಾಜೇಂದ್ರ ಗೋಟೂರು, ಸಿಆರ್‌ಪಿ ಅಮೃತಪ್ಪ ಕೆರೋಳ್ಳಿ, ಬಸವರಾಜ ಐನೋಳ್ಳಿ, ಪುಂಡಲಿಕ ಸನಾದಿ, ರಮೇಶ ಪಿ ಹಾಗೂ ಘಾಳಮ್ಮಾ ಮುಂತಾದವರು ಇದ್ದರು.ವಿಕಲಚೇತನರ ಗಣತಿ 12ರಿಂದ14: ತಾಲ್ಲೂಕಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಜತೆಗೆ ವಿಕಲ ಚೇತನ ಮಕ್ಕಳ ಗಣತಿಯೂ ಡಿ.12ರಿಂದ 14ವರೆಗೆ ನಡೆಯಲಿದೆ.ವಿಕಲ ಚೇತನ ಮಕ್ಕಳ ಗಣತಿ ಕಾರ್ಯಕ್ಕಾಗಿ ವಿಶೇಷ ಸಮನ್ವಯ ಶಿಕ್ಷಣ ತರಬೇತಿ ಪಡೆದ ಶಿಕ್ಷಕರು ಒಳಗೊಂಡಂತೆ 3 ಸದಸ್ಯರ ಒಟ್ಟು 10 ತಂಡಗಳನ್ನು ರಚಿಸಲಾಗಿದೆ. ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.  ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ 3ರಿಂದ 18ವರ್ಷ ವಯೋಮಿತಿಯ ಮಕ್ಕಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸುವರು ಎಂದು ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry