ಶುಕ್ರವಾರ, ಮೇ 7, 2021
21 °C
ಸಾಲು ಹರಿದ ಸೋಯಾ ಪೈರು

ಚಿಂಚೋಳಿ: ಮಳೆಯ ಅಭಾವ ಬಿತ್ತನೆ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮು ಆಶಾದಾಯಕ ಎನಿಸಿದರೂ ಕೂಡ ಕೆಲವೆಡೆ ಮಳೆಯ ಅಭಾವದಿಂದ ಬಿತ್ತನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಐನಾಪುರ ಹಾಗೂ ಚಿಂಚೋಳಿ, ಚಿಮ್ಮನಚೋಡ ಸುತ್ತಮುತ್ತ ಬಿತ್ತನೆ ಚುರುಕು ಪಡೆದರೆ, ಕೋಡ್ಲಿ, ಸುಲೇಪೇಟ, ನಿಡಗುಂದಾ ಕಡೆಗಳಲ್ಲಿ ಕುಂಠಿತ ಗೊಂಡಿರುವುದು ಕಂಡು ಬಂದಿದೆ.ತಾಲ್ಲೂಕಿನಲ್ಲಿ 70747 ಹೆಕ್ಟೇರ್ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ ಆದರೆ ಈ ವರೆಗೆ ತಾಲ್ಲೂಕಿನಲ್ಲಿ 11ಸಾವಿರ ಹೆಕ್ಟೇರ್ ಪ್ರದೇಶಲ್ಲಿ ಬಿತ್ತನೆ ಪೂರ್ಣಗೊಂಡಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ತಿಳಿಸಿದರು.ರೈತರು ಕೃಷಿ ಪರಿಕರಗಳನ್ನು ಸಿದ್ಧಪಡಿಸಿಕೊಂಡು, ಬೀಜ ಗೊಬ್ಬರ ಸಂಗ್ರಹಿಸಿ ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಅಲ್ಪಾವಧಿಯ ಬೆಳೆಗಳು ಈ ಬಾರಿ ಅದಲು ಬದಲಾಗಿದ್ದು, ಹೆಸರು, ಉದ್ದಿನ ಬೇಸಾಯ ಕ್ಷೇತ್ರವನ್ನು ಸೋಯಾಬೀನ್ ಆಕ್ರಮಿಸಿಕೊಂಡಿದೆ.ಹೀಗಾಗಿ ತಾಲ್ಲೂಕಿನಲ್ಲಿ ಸೋಯಾ ಬೀಜಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಅಂದಾಜು 2ಸಾವಿರ ಕ್ವಿಂಟಲ್‌ಗಿಂತಲೂ ಅಧಿಕ ಸೋಯಾ ಬೀಜ  ಮಾರಾಟ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.ಮುಂಚೆ ಬಿತ್ತಿದ ರೈತರ ಹೊಲದಲ್ಲಿ ಸೋಯಾ, ತೊಗರಿ, ಎಳ್ಳು ಬೆಳೆಯ ಪೈರು ಸಾಲು ಹರಿದಿದೆ. ಚಿಂಚೋಳಿಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿದೆ .ಆದರೆ ಬೇರೆ ಕಡೆಗಳಲ್ಲಿ ಇನ್ನೂ ವಾಡಿಕೆಯ ಮಳೆಯಾಗಿಲ್ಲ.ಹೊಲಗಳಿಗೆ ತೆರಳಿ ಜಮೀನು ಹಸನು ಮಾಡುವ ಕೆಲಸ ಬಿರುಸಿನಿಂದ ನಡೆಸುತ್ತಿರುವ ರೈತಾಪಿ ಜನರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಒಟ್ಟಾರೆ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಹಸಿಗೆ ಹಸಿ ಕಲಿಯುವಷ್ಟು ಮಳೆ ಸುರಿದರೆ ಅನ್ನದಾತರ ಮೊಗದಲ್ಲಿ ಮಂದಹಾಸ ನಳ ನಳಿಸಲಿದೆ. ಜತೆಗೆ ಕುಡಿವ ನೀರಿನ ಬವಣೆಯೂ ನಿವಾರಣೆಯಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.