ಚಿಕಾಗೊ ನಗರಸಭೆ ಸದಸ್ಯನಾಗಿ ಭಾರತೀಯನ ಆಯ್ಕೆ

7

ಚಿಕಾಗೊ ನಗರಸಭೆ ಸದಸ್ಯನಾಗಿ ಭಾರತೀಯನ ಆಯ್ಕೆ

Published:
Updated:

 ಚಿಕಾಗೊ (ಐಎಎನ್ಎಸ್): ಚಿಕಾಗೊ ನಗರ ಸಭೆಯ ಸದಸ್ಯರಾಗಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಯ್ಕೆಯಾಗಿದ್ದಾರೆ.

ಚಿಕಾಗೊ ನಗರದ 47ನೇ ವಾರ್ಡ್ ನಿಂದ ನಗರಸಭೆಯ ಸದಸ್ಯರಾಗಿ ಮೂವತ್ತು ವರ್ಷದ ಭಾರತೀಯ ಮೂಲದ ಅಮೆರಿಕ ಸಂಜಾತ ಅಮೆಯ್ ಪವಾರ್ ಎಂಬುವವರು ಆಯ್ಕೆಯಾಗಿದ್ದಾರೆ. ಇದುವರೆಗೆ 30 ವರ್ಷಕ್ಕೂ ಅಧಿಕ ಕಾಲದವರೆಗೆ ಈ ಸ್ಥಾನವನ್ನು ಜೆನೆ ಶುಲ್ಟರ್ ಎಂಬುವವರು ಪ್ರತಿನಿಧಿಸುತ್ತಿದ್ದರು.

ಪವಾರ್ ಅವರ ತಂದೆ ಭಾರತದಿಂದ ವಲಸೆ ಬಂದವರು. ಪವಾರ್ ಅವರು ಇಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry