ಶುಕ್ರವಾರ, ಡಿಸೆಂಬರ್ 6, 2019
19 °C

ಚಿಕಿತ್ಸೆಗಾಗಿ ದೆಹಲಿಗೆ ಬಂದ ಅಣ್ಣಾ ಹಜಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕಿತ್ಸೆಗಾಗಿ ದೆಹಲಿಗೆ ಬಂದ ಅಣ್ಣಾ ಹಜಾರೆ

ನವದೆಹಲಿ: ಕೆಮ್ಮು ಮತ್ತು ಬೆನ್ನು ನೋವಿನಿಂದ ಬಳಲುತ್ತಿರುವ ಸಾಮಾಜಿಕ ಕಾರ್ಯಕರ್ತ, ಸಾರ್ವಜನಿಕ ಕ್ಷೇತ್ರದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ (74) ಅವರು, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯೊಂದರಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಭಾನುವಾರ ಇಲ್ಲಿಗೆ ಆಗಮಿಸಿದರು.   ನಸುಕಿನಲ್ಲಿ 1.30ರ ವೇಳೆಗೆ ವಿಮಾನದ ಮೂಲಕ ಪುಣೆಯಿಂದ ದೆಹಲಿಗೆ ಬಂದಿಳಿದ ಹಿರಿಯ ಗಾಂಧಿವಾದಿ ಅಣ್ಣಾ ಅವರನ್ನು ನಂತರ ಹರಿಯಾಣದ ಗುರುಗಾಂವ್ ನ ಮೆದಾಂತ ಆಸ್ಪತ್ರೆಗೆ ಕರೆದೊಯ್ಯಲಾಯಿತು. ~ಅಣ್ಣಾ ಹಜಾರೆ ಅವರು ಕೆಮ್ಮು ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರನ್ನು ಸಂಪೂರ್ಣವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುವುದು~ ಎಂದು ಅವರ ಅಪ್ತರು ತಿಳಿಸಿದ್ದಾರೆ.~ಆರೋಗ್ಯ ಸುಧಾರಿಸಿದ ನಂತರ ನಾನು ಭಾರತದಾದ್ಯಂತ ಪ್ರವಾಸ ಕೈಗೊಳ್ಳುವೆ. ನನ್ನ ವಿರುದ್ಧ  ಭ್ರಷ್ಟಾಚಾರಿಗಳು ಮಾಡುತ್ತಿರುವ ಆರೋಪಗಳು ಸಾರ್ವಜನಿಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಆಗ ಆ ಭ್ರಷ್ಟರಿಗೆ ಗೊತ್ತಾಗುತ್ತದೆ~ ಎಂದು ಅಣ್ಣಾ ಹಜಾರೆ ಸ್ಪಷ್ಟಪಡಿಸಿದರು.

 

ಪ್ರತಿಕ್ರಿಯಿಸಿ (+)