ಸೋಮವಾರ, ಮೇ 23, 2022
21 °C

ಚಿಕಿತ್ಸೆಗೆ ಪರಿಹಾರ ನಿಧಿಯಿಂದ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಎರಡೂ ಕಿಡ್ನಿ ವಿಫಲಗೊಂಡು ತೀವ್ರ ಸಂಕಷ್ಟದಲ್ಲಿರುವ ವಿಜಯಪುರದ ತನುಶ್‌ನ ಅನಾರೋಗ್ಯದ ಕುರಿತಂತೆ ಜೂನ್ 4ರಂದು `ಪ್ರಜಾವಾಣಿ~ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ನೆರವು ನೀಡುವುದಾಗಿ ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ.ತನುಶ್‌ನ ಚಿಕಿತ್ಸೆಗೆ ಪೋಷಕರು ದಾನಿಗಳಲ್ಲಿ ಕೋರಿದ್ದ ಆರ್ಥಿಕ ನೆರವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತಮ್ಮ ಪರಿಹಾರ ನಿಧಿಯಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮತ್ತು ಕಿಡ್ನಿ ಕಸಿ ಮಾಡಲು ಉಚಿತ ಚಿಕಿತ್ಸೆಯ ನೆರವು ನೀಡುವ ಭರವಸೆ ನೀಡಿದ್ದಾರೆ.ಸಿ.ಎಂ ಪರಿಹಾರ ನಿಧಿಯ ನಿರ್ವಹಣಾಧಿಕಾರಿ ಡಾ. ಎಚ್.ಆರ್. ಮಹದೇವ್ ಪೋಷಕರನ್ನು  ಗುರುವಾರ (ಜೂನ್ 7) ವೈದ್ಯಕೀಯ ದಾಖಲೆಗಳೊಂದಿಗೆ ಬಂದು ಭೇಟಿಯಾಗಲು ತಿಳಿಸಿದ್ದಾರೆ.ಸಿಇಟಿಯಲ್ಲಿ 6500ನೇ ರ‌್ಯಾಂಕ್: ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ತನುಶ್ ಎಂಜಿನಿಯರಿಂಗ್‌ನಲ್ಲಿ 30 ಸಾವಿರ ರ‌್ಯಾಂಕ್ ಹಾಗೂ ವೈದ್ಯಕೀಯದಲ್ಲಿ 6,500ನೇ ರ‌್ಯಾಂಕ್ ಗಳಿಸ್ದ್ದಿದಾನೆ.ಏತನ್ಮಧ್ಯೆ ತನುಶ್ ವೈದ್ಯಕೀಯ ಪದವಿ ಓದಿ ಡಾಕ್ಟರ್ ಆಗಿ ಸೇವೆ ಸಲ್ಲಿಸಬೇಕೆಂಬ ತನ್ನ ಹಂಬಲವನ್ನು ಮತ್ತೆ ಹೊರಗೆಡವಿದ್ದಾನೆ. ಆದರೆ ಈಗ ಚಿಕಿತ್ಸೆ ನೀಡುತ್ತಿರುವ ವೈದ್ಯರು ಈಗಿನ ಸ್ಥಿತಿಯಲ್ಲಿ ಅವನ ಆಸೆ ನೆರವೇರಿಸಿಕೊಳ್ಳುವುದು ಕಷ್ಟ ಎಂದು ಹೇಳ್ದ್ದಿದ್ದಾರೆ. ಇದನ್ನು ಕೇಳಿದ ತನುಶ್ ಬಹಳ ನಿರಾಸೆಗೊಂಡ್ದ್ದಿದಾನೆ. ತನ್ನ ಪರಿಸ್ಥಿತಿಯ ಬಗ್ಗೆ ತೀವ್ರ ದುಖಿಃತನಾಗಿದ್ದಾನೆ. ಆದರೂ ತನ್ನ ಹಠವನ್ನು ಬಿಡದೆ ವೈದ್ಯನಾಗಿ ಸಾಧಿಸುವ ಹಂಬಲವನ್ನು ಆತ ಬುಧವಾರ `ಪ್ರಜಾವಾಣಿ~ಯೊಂದಿಗೆ ವ್ಯಕ್ತಪಡಿಸಿದ.ಅಂತರ್ಜಾಲದ ಮೂಲಕ ಪ್ರತಿಕೆಯಲ್ಲಿ ಪ್ರಕಟವಾದ ವಿಷಯ ತಿಳಿದ ವಿದೇಶದಲ್ಲಿರುವ (ಸಿಂಗಪುರ ಮತ್ತು ಹಾಂಕ್‌ಕಾಂಗ್‌ನ )ಕನ್ನಡಿಗರು ಹಾಗೂ ಉತ್ತರ ಕರ್ನಾಟಕದ ಬೀದರ್, ಬಿಜಾಪುರ ಮತ್ತಿತರ ಕಡೆಗಳಿಂದ ಸಹೃದಯಿಗಳು ಆತನಿಗೆ ದೂರವಾಣಿ ಕರೆ ಮಾಡುತ್ತಿದ್ದು ತನುಶ್‌ನ ಚಿಕಿತ್ಸೆಗೆ ಸಹಕಾರ ನೀಡುವ ಭರವಸೆ ನೀಡುತ್ತಿರುವುದಾಗಿ ಪೋಷಕರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.