ಚಿಕಿತ್ಸೆಗೆ ಮಂಡೇಲಾ ಸ್ಪಂದನೆ

7

ಚಿಕಿತ್ಸೆಗೆ ಮಂಡೇಲಾ ಸ್ಪಂದನೆ

Published:
Updated:

ಜೋಹಾನ್ಸ್ ಬರ್ಗ್ (ಪಿಟಿಐ):  ಕರುಳು ಸಂಬಂಧ ಕಾಯಿಲೆಗೆ ತುತ್ತಾಗಿ ಇಲ್ಲಿಯ ಆಸ್ಪತ್ರೆಗೆ ದಾಖಲಾಗಿರುವ ದಕ್ಷಿಣ ಆಫ್ರಿಕಾ ನಾಯಕ, 94 ವರ್ಷದ ನೆಲ್ಸನ್ ಮಂಡೆಲಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಮೂಲಗಳು ತಿಳಿಸಿವೆ.ಮಂಡೆಲಾ ಸಾಮಾನ್ಯ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಈತನಕ ತಿಳಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ನಾಲ್ಕು ದಿನಗಳ ತರುವಾಯ ಇದೀಗ ಈ ಸಂಬಂಧ ಅಧಿಕೃತ ಹೇಳಿಕೆ ನೀಡಿರುವ ಅಧ್ಯಕ್ಷೀಯ ಕಚೇರಿ ಮ್ಯಾಕ್ ಮಾಹಾರಾಜ್ `ಮಂಡೆಲಾಗೆ ಕರುಳು ಸಂಬಂಧಿ ತೊಂದರೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry