ಬುಧವಾರ, ಜುಲೈ 28, 2021
28 °C

ಚಿಕೂನ್‌ಗುನ್ಯದಿಂದ ಗ್ರಾಮಸ್ಥರೆಲ್ಲ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ತಾಲ್ಲೂಕಿನ ಬರದಾಪೂರ ಗ್ರಾಮದಲ್ಲಿ ಬಹುತೇಕ ಮನೆಗಳಲ್ಲಿನ ಜನರು ಕೈಕಾಲು ನೋವಿನಿಂದ ನರಳುತ್ತಿದ್ದಾರೆ. ಪ್ರತಿ ಮನೆಯಲ್ಲೂ ಜ್ವರ, ಮಂಡಿನೋವು, ಕೀಲು ಬಾಧೆಯಿಂದ ಯುವಕರು, ಮಕ್ಕಳು, ವೃದ್ಧರು ಬಳಲುತ್ತಿದ್ದಾರೆ. ನಿತ್ಯವೂ ಕೂಲಿ ನಾಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಕಾರ್ಮಿಕ ಜನರಂತೂ ಅಕ್ಷರಶ: ನೆಲ ಹಿಡಿದು ನರಳುತ್ತಿರುವದರಿಂದ ಕುಟುಂಬದ ಜನರಿಗೆ ದಿಕ್ಕೆ ತೋಚದಂತಾಗಿದ್ದಾರೆ.ಎರಡು ವಾರದಿಂದ ಊರೆಲ್ಲ ಹರಡಿರುವ ಚಿಕೂನ್‌ಗುನ್ಯ ರೋಗದ ಬಗ್ಗೆ ತಾಲ್ಲೂಕು ಅಡಳಿತಕ್ಕೂ ಸುದ್ದಿ ತಿಳಿಸಲಾಗಿದೆ. ಖಟಕಚಿಂಚೋಳಿಯ ವೈದ್ಯರು ಮತ್ತು ಎ.ಎನ್.ಎಂ ಮಾತ್ರ ಆಗಾಗ ಬರುತ್ತಾರೆ. ಗುಳಿಗೆ ಕೊಟ್ಟು ಹೋಗುತ್ತಾರೆ.ರೋಗವು ಊರೆಲ್ಲಾ ಹರಡಿದರೂ ಕೂಡ ತಾಲ್ಲೂಕು ಆರೋಗ್ಯ ಇಲಾಖೆ ಈ ಕಡೆ ತಲೆ ಹಾಕಿಲ್ಲ. ರಕ್ತ ಪರೀಕ್ಷೆ ಮಾಡಿಸಿಲ್ಲ. ಹಣ ಇದ್ದವರು ಪಟ್ಟಣಕ್ಕೆ ಹೋಗಿ ಒಳ್ಳೆ ಆಸ್ಪತ್ರೆಗೆ ತೋರಿಸುತ್ತಿದ್ದಾರೆ. ಬಡವರು ಏನು ಮಾಡಬೇಕು ಎಂಬುದು ಗ್ರಾಮದ ಮುಖಂಡರಾದ ಸಂಗಶಟ್ಟಿ, ಶಾಮರಾವ ಬಿರಾದಾರ, ಬಾಬುರಾವ ರಂಜೇರೆ, ಸಿದ್ದಪ್ಪ, ಬಸವರಾಜ, ಬಿ.ಪ್ರಕಾಶ ಮುಂತಾದವರ ಆರೋಪವಾಗಿದೆ.ಗ್ರಾಪಂ ನಿರ್ಲಕ್ಷತೆ: ಡಾವರಗಾಂವ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಈ ಊರಿನ ಚರಂಡಿಗಳು ಹೊಲಸು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಗ್ರಾಮದಲ್ಲಿರುವ ಕುಡಿಯುವ ನೀರಿನ ಬೋರ್‌ವೆಲ್ ಸುತ್ತಲೂ ಹೊಲಸು ತುಂಬಿಕೊಂಡು ಸೊಳ್ಳೆಗಳು ಹೆಚ್ಚಾಗಿವೆ. ಹಲವು ಮನೆಗಳ ಮುಂದೆ ಬಚ್ಚಲು ನೀರು ಹರಿಯುತ್ತಿರುವದರಿಂದ ರೋಗ ಉಲ್ಬಣಗೊಳ್ಳಲು ಕಾರಣವಾಗಿದೆ. ಹಾಲಿನ ಸೊಸೈಟಿ ಮುಂದಿನ ಟ್ಯಾಂಕ್‌ನಲ್ಲಿ ಹೊಲಸು ನೀರು ತುಂಬಿಕೊಂಡಿವೆ.ಈ ಬಗ್ಗೆ ಗ್ರಾಪಂ ಪಿಡಿಓ ಮತ್ತು ಅಧ್ಯಕ್ಷರಿಗೆ ಹಲವು ಸಲ ತಿಳಿಸಲಾಗಿದೆ. ತಹಸೀಲ್ದಾರ ಅವರು ಈಚೆಗೆ ಗ್ರಾಮಕ್ಕೆ ಭೇಟಿ ನೀಡಿದಾಗ ಜನರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಬ್ಲೀಚಿಂಗ್ ಪೌಡರ್ ಅಥವಾ ಡಿಡಿಟಿ ಸಿಂಪಡಿಸಲು ಹೇಳಿದರೆ ಗ್ರಾಪಂನಲ್ಲಿ ಹಣವಿಲ್ಲ ಎಂದು ಪಿಡಿಓ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಮುಂದೆ ಸೋಮವಾರ ತಿಳಿಸಿದ್ದಾರೆ. ಕೂಡಲೇ ಆರೋಗ್ಯ ಇಲಾಖೆ ಮತ್ತು ಗ್ರಾಪಂ ಅಡಳಿತ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.