ಚಿಕ್ಕಜಾಜೂರು: ಬಾಲಕಿ ಮೇಲೆ ಅತ್ಯಾಚಾರ

7

ಚಿಕ್ಕಜಾಜೂರು: ಬಾಲಕಿ ಮೇಲೆ ಅತ್ಯಾಚಾರ

Published:
Updated:

ಚಿಕ್ಕಜಾಜೂರು (ಚಿತ್ರದುರ್ಗ ಜಿಲ್ಲೆ): ಬಾಲಕಿಯನ್ನು ಮನೆಯೊಳಗೆ ಕೂಡಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ ಘಟನೆ ಇಲ್ಲಿಗೆ ಸಮೀಪದ ಕೊಂಡಾಪುರ ಗ್ರಾಮದಲ್ಲಿ ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ.ಕೊಂಡಾಪುರ ಗ್ರಾಮದ ರಘು (23), ಅದೇ ಗ್ರಾಮದ ಎಂಟನೇ ತರಗತಿ ಓದುತ್ತಿರುವ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.‘ಕಳೆದ ಶನಿವಾರ ರಾತ್ರಿ ಬಾಲಕಿ ಪಕ್ಕದ ಮನೆಯೊಂದರಲ್ಲಿ ಟಿವಿ ನೋಡಿಕೊಂಡು ಮನೆಗೆ ಮರಳಿ ಬರುತ್ತಿದ್ದಾಗ, ಯುವಕ ಬಲವಂತದಿಂದ ಎಳೆದುಕೊಂಡು ಅವನ ಮನೆಯಲ್ಲಿ ಕೂಡಿ ಹಾಕಿದ್ದಾನೆ. ಸಹಾಯಕ್ಕೆ ಕೂಗಿಕೊಳ್ಳಲು ಹೋದಾಗ ಬಾಯಿಗೆ ಬಟ್ಟೆ ತುರುಕಿ, ಕೈಗಳನ್ನು ಕಟ್ಟಿ ಹಾಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ತಾಯಿಗೆ ತಿಳಿಸಿದ್ದಾಳೆ’ ಎಂದು ಬಾಲಕಿಯ ದೊಡ್ಡಪ್ಪ ಹಾಗೂ ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ತಿಳಿಸಿದ್ದಾರೆ.ಚಿಕ್ಕಜಾಜೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry