ಚಿಕ್ಕತಿರುಪತಿಯಲ್ಲಿ ಬ್ರಹ್ಮರಥೋತ್ಸವ

7

ಚಿಕ್ಕತಿರುಪತಿಯಲ್ಲಿ ಬ್ರಹ್ಮರಥೋತ್ಸವ

Published:
Updated:

ಕನಕಪುರ: ಐತಿಹಾಸಿಕ ಜಾತ್ರೆ ಎಂದೇ ಖ್ಯಾತಿ ಹೊಂದಿರುವಂತ ಚಿಕ್ಕತಿರುಪತಿ ಕಲ್ಲಹಳ್ಳಿ ಶ್ರೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾ ವಿಜೃಂಭಣೆಯಿಂದ ನಡೆಯಿತು.ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ತಾಲ್ಲೂಕು ತಹಸೀಲ್ದಾರ್ ಪ್ರಜ್ಞಾ, ಕ್ಷೇತ್ರದ ಶಾಸಕರಾದ ಡಿ.ಕೆ.ಶಿವಕುಮಾರ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಹ್ರ್ಮರಥೋತ್ಸವಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ ವ್ಯಾಪ್ತಿಗೆ ಬರುವ ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳಿಂದ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡರು.ಅರವಟ್ಟಿಗೆ: ಬಿಸಿಲು ಬೇಗೆಯಲ್ಲಿ ಜಾತ್ರೆಗೆ ಆಗಮಿಸುತ್ತಿದ್ದ ಭಕ್ತರಿಗೆ ನೀರುಮಜ್ಜಿಗೆ, ಪಾನಕ, ಹೆಸರುಬೇಳೆ ವಿತರಿಸಲು ಅಲ್ಲಲ್ಲಿ ಅರವಟ್ಟಿಗೆ ಕೇಂದ್ರಗಳನ್ನು ತೆರೆದು ಭಕ್ತರಿಗೆ ಹಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry