ಭಾನುವಾರ, ಜನವರಿ 19, 2020
26 °C
ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಲಹೆ

ಚಿಕ್ಕಮಗಳೂರು:ನಗರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿ, ಕೈಗೆತ್ತಿಕೊಳ್ಳಲೇ ಬೇಕಾಗದ ಕಾಮಗಾರಿಗಳನ್ನು ಪಟ್ಟಿ ಮಾಡಿ ಆದ್ಯತೆ ಮೇಲೆ ಕೆಲಸ ನಿರ್ವಹಿಸಲು ಮಾರ್ಗ ಸೂಚಿ ಅಳವಡಿಸಬೇಕು. ಹೂ, ಹಣ್ಣು ಮತ್ತು ತರಕಾರಿ ಮಾರಾಟ, ತಳ್ಳುಗಾಡಿಗಳಲ್ಲಿ ಮಾರಾಟ ಮಾಡುವ ತಿಂಡಿ, ತಿನಿಸುಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು..ನಗರಸಭಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 2014–15ನೇ ಸಾಲಿನ  ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರಿಂದ ಕೇಳಿ ಬಂದ ಸಲಹೆ ಗಳಿವು. ಅರ್ಧಕ್ಕೆ ನಿಂತಿರುವ ದೀಪಾ ನರ್ಸಿಂಗ್ ಹೋಂ ಎದುರು ಹಾದುಹೋಗಿರುವ ರಸ್ತೆ ಮತ್ತು ಗೌರಿಕಾಲುವೆ ರಸ್ತೆ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು.

ಬಸ್ ನಿಲ್ದಾಣ ಬಳಿ ಫ್ಲೈ ಓವರ್ ನಿರ್ಮಿ ಸುವುದು ಸೂಕ್ತ. ನಿರೀಕ್ಷಿತ ಆದಾಯಕ್ಕೆ ಉದ್ದೇಶಿತ ಖರ್ಚು ಮಾಡಬೇಕು. ನಗರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸುವ ವಾತಾ ವರಣ ನಿರ್ಮಾಣವಾಗಬೇಕು ಎಂದು ಶ್ರೀಧರ್ ಉರಾಳ್ ತಿಳಿಸಿದರು.ನಗರಸಭಾ ಸದಸ್ಯ ಎಚ್‌.ಎಸ್.ಪುಟ್ಟಸ್ವಾಮಿ ಮಾತನಾಡಿ, ದಂಟರಮಕ್ಕಿ ಕೆರೆ ಏರಿಯ ದೂಳಿನಲ್ಲಿ ಹಂದಿ ಮಾಂಸ ಮಾರಾಟ ನಡೆ ಯುತ್ತಿದೆ. ಮುಂದಿನ ಬಜೆಟ್‌ನಲ್ಲಿ ಪ್ರತ್ಯೇಕ ಮಳಿಗೆ ನಿರ್ಮಿಸಬೇಕು. ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಕತ್ತಲೆಯಲ್ಲಿ ತೆರಳಬೇಕಾ ಗಿರುವುದರಿಂದ ಆಜಾದ್ ವೃತ್ತದಿಂದ ಹಿರೇ ಮಗಳೂರು ವರೆಗೆ ರಸ್ತೆ ಎರಡು ಬದಿಯಲ್ಲಿ ವಿದ್ಯುತ್ ದೀಪ ಅಳವಡಿಸಬೇಕು.

ಕಸವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಕಾರ್ಮಿಕರ ಕೊರತೆ ಉಂಟಾಗಿದ್ದು, ಹೆಚ್ಚುಮಂದಿ ಪೌರ ಕಾರ್ಮಿಕರ ನೇಮಕವಾಗಬೇಕು. ಗ್ಯಾರೇಜ್‌ಗಳು ಕಾರ್ಯನಿರ್ವಹಿಸಲು ಪ್ರತ್ಯೇಕ ಜಾಗ ಒದಗಿಸಿಕೊಡುವುದು, ಟ್ರಕ್ ಟರ್ಮಿನಲ್ ಜಾಗದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಸಲಹೆ ನೀಡಿದರು.ನಗರಸಭಾ ಮಾಜಿ ಅಧ್ಯಕ್ಷ ಸಿ.ಆರ್. ಪ್ರೇಂಕು ಮಾರ್ ಮಾತನಾಡಿ, ಕರಗುವ ಮತ್ತು ಕರಗದಿರುವ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಸೂಕ್ತ ಟ್ರ್ಯಾಕ್ಟರ್ ಮತ್ತು ಕಂಟೈನರ್ ಖರೀದಿಸಬೇಕಾಗಿದೆ. ಮಾರ್ಕೆಟ್ ರಸ್ತೆಯನ್ನು ಅಭಿವೃದ್ಧಿಪಡಿಸಿ, ಉತ್ತಮ ಚರಂಡಿ ನಿರ್ಮಿಸುವುದು ಅಗತ್ಯ.ಖಾಸಗಿ ಬಸ್ ನಿಲ್ದಾಣದಲ್ಲಿ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸಿ ಅಲ್ಲಿರುವ ಮಳಿಗೆ ಗಳನ್ನು ಉದ್ಘಾಟನೆ ಆಗಬೇಕಿದೆ ಎಂದು ತಿಳಿಸಿದರು. ಹಿಂದು ಮುಸಾಫಿರಖಾನ ಮತ್ತು ಕೃಷ್ಣರಾ ಜೇಂದ್ರ ತರಕಾರಿ ಮಳಿಗೆ ಜಾಗದಲ್ಲಿ ಸುಸಜ್ಜಿತ ಮಳಿಗೆ ನಿರ್ಮಿಸಿ ನಗರಸಭೆಗೆ ಆದಾಯ ಬರುವಂತೆ ನೋಡಿಕೊಳ್ಳಬೇಕಿದೆ. ಕುಡಿಯುವ ನೀರಿನ ವಿತರಣೆ ವ್ಯವಸ್ಥೆ ಸರಿಪಡಿಸಿ, ಫಿಲ್ಟರ್ ಮೀಡಿಯಾ ದುರಸ್ತಿ ಕಾರ್ಯಕೈಗೆತ್ತಿಕೊಳ್ಳಲು ಬಜೆಟ್‌ನಲ್ಲಿ ಅಗತ್ಯ ಅನುದಾನ ಕಾಯ್ದಿರಿ ಸುವುದು ಸೂಕ್ತ ಎಂದು ಹೇಳಿದರು.ನಗರಸಭಾ ಸದಸ್ಯ ರೂಬೆನ್ ಮೊಸೆಸ್ ಮಾತನಾಡಿ, ಬೀದಿ ನಾಯಿ ಮತ್ತು ಹಂದಿಗಳ ಕಾಟ ತಪ್ಪಿಸಬೇಕು. ಕಸ ಸಂಗ್ರಹಿಸುವ ಗಂಟೆ ಗಾಡಿಗಳಿಗೆ ಚಕ್ರಗಳಿಲ್ಲದೆ ತಳ್ಳುವ ಸ್ಥಿತಿ ಇದೆ ಕೂಡಲೇ ದುರಸ್ತಿಪಡಿಸಿ, ಗೌರಿ ಕಾಲುವೆಯಲ್ಲಿ ಉದ್ಯಾನವನಗಳನ್ನು ನುಂಗಿ ಹಾಕಲಾಗಿದೆ ಅಲ್ಲಿರುವ ಉದ್ಯಾನವನ ಅಭಿವೃದ್ಧಿ ಪಡಿಸಿ ಎಂದು ಒತ್ತಾಯಿಸಿದಾಗ, ಉದ್ಯಾನವನಗಳ ಅಭಿವೃದ್ಧಿಗೆ ಪ್ರತ್ಯೇಕ ಸಭೆಕರೆದು ಚರ್ಚಿಸಲಾಗು ವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಕುಮಾರ್ ಮಾತನಾಡಿ, ನಗರ ಸಭೆಯಲ್ಲಿ ಶೇ.22.75ರ ಅನುದಾನದಲ್ಲಿ ಹೆಚ್ಚಿನ ಸವಲತ್ತು ನೀಡಲು ಅಧಿಕಾರಿಗಳು ಮುಂದಾ ಗಬೇಕು ಎಂದು ಒತ್ತಾಯಿಸಿದರು. ನಗರಸಭಾ ಸದಸ್ಯೆ ಜಗದೀಶ್ ಮಾತನಾಡಿ, ಚರಂಡಿಗಳ ಹೂಳು ಎತ್ತಲು ಹೆಚ್ಚಿನ ಅನುದಾನ ಕಾಯ್ದಿರಿಸು ವುದು ಸೂಕ್ತ.ನಗರದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೆಟ್ಟು ಹೋಗಿರುವ ಕೊಳವೆ ಬಾವಿಗಳನ್ನು ಸ್ವಚ್ಛಗೊಳಿಸಿ ನೀರುಸಿಗುವಂತೆ ಮಾಡಬೇಕೆಂದು ಸಲಹೆ ನೀಡಿದರು.ನಗರಸಭೆ ಅಧಿಕಾರಿಗಳಿಗೆ ಬದ್ಧತೆ, ದೂರದೃಷ್ಟಿ ಇಲ್ಲ. ಜನರ ಸಮಸ್ಯೆ ನಿವಾರಣೆಗೆ ಮನೆ ಬಾಗಿಲಿಗೆ ನಗರಸಭೆಯನ್ನು ಕೊಂಡೊ ಯ್ಯಬೇಕು. ಅಗತ್ಯ ಸ್ಥಳದಲ್ಲಿ ಹೈಮಾಸ್ಕ್ ಬೀದಿ ದೀಪ ಅಳವಡಿಸಬೇಕು ಎಂದು ವಿಶ್ವನಾಥ ತಿಳಿಸಿದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯರ ಹುದ್ದೆ ಭರ್ತಿಮಾಡಿ ಬಡವರ ಚಿಕಿತ್ಸೆಗೆ ನೆರವಾಗಬೇಕೆಂದು ಅನಿಲ್ ಆನಂದ್ ಮನವಿ ಮಾಡಿದರು.ಹೆಚ್ಚು ಹಣ ಖರ್ಚುಮಾಡಿ ಕೈಗೊಳ್ಳುವ ಕಾಮಗಾರಿಗೆ ನಾಮಫಲಕ ಅಳವಡಿಕೆ ಸೂಕ್ತ ಎಂದು ಮಂಜುನಾಥ ಜೋಷಿ ತಿಳಿಸಿದರೆ, ಬಸವನಹಳ್ಳಿ ಸುಂದರ ಕರೆ ಹಾಳಾಗಿದೆ ದುರಸ್ತಿಪಡಿಸಿ, ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ಸಾಗಲು ಕಾಲುದಾರಿಗಳಿದ್ದವು ಈಗ ಅವುಗಳು ಮಾಯವಾಗಿವೆ. ಅಧಿಕಾರಿಗಳು ಅವುಗಳನ್ನು ಪತ್ತೆಮಾಡಬೇಕು ಎಂದು ಎಂ.ಆರ್.ಗೋಪಾಲ ತಿಳಿಸಿದರು.ಕಳೆದ ವರ್ಷ ನಡೆದ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಅನುಷ್ಠಾನಗೊಂಡಿರುವ ಕುರಿತು ಮಾಹಿತಿ ನೀಡಬೇಕು. ನಗರಸಭೆಗೆ ಬಂದಿರುವ ಆದಾಯ ಮತ್ತು ಖರ್ಚಿನ ಮಾಹಿತಿ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ವ್ಯಯಿಸಿರುವ ಹಣದ ಮಾಹಿತಿ ನೀಡಬೇಕೆಂದು ಸದಸ್ಯೆ ಶ್ಯಾಮಲ ಹೇಳಿದರು.ಟ್ರಕ್ ಟರ್ಮಿನಲ್ ಜಾಗದಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. ಕುಡಿಯುವ ನೀರಿನ ಸೌಲಭ್ಯ ಮತ್ತು ಶೌಚಾಲಯ ನಿರ್ಮಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಎಂ.ಎಸ್.ಐ. ಅಮಾನ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)