ಚಿಕ್ಕರಂಗಪ್ಪ ಚಾಂಪಿಯನ್

ಶನಿವಾರ, ಜೂಲೈ 20, 2019
28 °C

ಚಿಕ್ಕರಂಗಪ್ಪ ಚಾಂಪಿಯನ್

Published:
Updated:

ಕೊಯಮತ್ತೂರು (ಪಿಟಿಐ): ಪ್ರಭಾವಿ ಪ್ರದರ್ಶನ ನೀಡಿದ ಕರ್ನಾಟಕದ   ಎಸ್.ಚಿಕ್ಕರಂಗಪ್ಪ ಇಲ್ಲಿ ನಡೆಯುತ್ತಿರುವ ಅಂತರ ರಾಜ್ಯ ಅಮೆಚೂರ್ ಗಾಲ್ಫ್  ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.ಕೊಯಮತ್ತೂರು ಗಾಲ್ಫ್  ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸ್ಪರ್ಧೆಗಳಲ್ಲಿ ನಿಖರ ಕ್ಲಬ್ ಬೀಸಿ 71(ನಾಲ್ಕು ಸುತ್ತಿನಿಂದ ಒಟ್ಟು 299)ಪಾಯಿಂಟ್ ಕಲೆ ಹಾಕಿದ ಚಿಕ್ಕರಂಗಪ್ಪ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅಭಿಜಿತ್ ಚಡಾ ಅವರನ್ನು ಹಿಂದಿಕ್ಕಿದರು. ಕರ್ನಾಟಕದ ಇನ್ನೊಬ್ಬ ಆಟಗಾರ ಖಲೀಲ್ ಜೋಶಿ (75, ಒಟ್ಟು 306) ಮೂರನೇ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry