ಸೋಮವಾರ, ಅಕ್ಟೋಬರ್ 21, 2019
21 °C

ಚಿಕ್ಕಲ್ಲೂರಿನಲ್ಲಿ ಭಾರಿ ಕಂಡಾಯದ ಒಡೆಯ ಚಿತ್ರೀಕರಣ

Published:
Updated:

ಕೊಳ್ಳೇಗಾಲ: “ವರ್ಷಕ್ಕೊಮ್ಮೆ ಚಿಕ್ಕಲ್ಲೂರು ಜಾತ್ರೆ ನಡೆದೈತೆ” ಹಾಡಿನ ಚಿತ್ರೀಕರಣವನ್ನು ಭಕ್ತರ ಸಮೂಹದ ಚಿಕ್ಕಲ್ಲೂರಿನಲ್ಲಿ “ಭಾರಿ ಕಂಡಾಯದ ಒಡೆಯ” ಚಿತ್ರದ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ನಿರ್ದೇಶಕ ಸಿ. ಸಿದ್ದಾರ್ಥ ತಿಳಿಸಿದರು.ಪಟ್ಟಣದ ಮರಡೀಗುಡ್ಡದ ತಪ್ಪಲಿನ ಮಂಟೇಸ್ವಾಮಿ ದೇವಾಲ ಯದಲ್ಲಿ ಗುರುವಾರ ಏರ್ಪಡಿಸಿದ್ದ ಎಸ್.ಆರ್. ಕ್ರೀಯೇಷನ್ ವತಿಯಿಂದ ನಿರ್ಮಾಣವಾ ಗುತ್ತಿರುವ “ಭಾರಿ ಕಂಡಾಯ ದೊಡಯ” ಚಿತ್ರದ ಚಿತ್ರೀಕರಣ ಮುಹೂರ್ತದಲ್ಲಿ ಮಾತನಾಡಿದರು.ಪವಾಡ ಪುರುಷ ಸಿದ್ದಪ್ಪಾಜಿ ಮತ್ತು ಮಂಟೇಸ್ವಾಮಿ ಅವರ ಪವಾಡದ ಕಥೆ ಆಧಾರಿಸಿ ಚಿತ್ರ ತಯಾರಾಗುತ್ತಿದೆ. ವರ್ಷ ಕ್ಕೊಮ್ಮೆ ಚಿಕ್ಕಲ್ಲೂರು ಜಾತ್ರೆ ನಡೆದೈತೆ ಹಾಡು ಸೇರಿದಂತೆ 8 ಹಾಡುಗಳ ಚಿತ್ರೀಕರಣ ಕೊಳ್ಳೇಗಾಲ ಸುತ್ತಮುತ್ತ ನಡೆಯಲಿದೆ ಎಂದು ವಿವರಿಸಿದರು.ಕಲಾವಿದರಾದ ಮಿಮಿಕ್ರಿ ಬಸವಣ್ಣ, ರಾಜು, ಛಾಯಾಗ್ರಾಹಕ ಸುಧಾಕರ್, ಸಹಾಯಕ ಸತೀಶ್ ಕುಮಾರ್‌ಕೆ.ಗೌಡಗೆರೆ, ಶೇಷಣ್ಣ, ಮಹೇಶ್, ಬಿ. ಲಿಂಗರಾಜು, ಪ್ರಭುಸ್ವಾಮಿ, ಗಣೇಶ, ರವಿಕುಮಾರ್, ಪ್ರಕಾಶ, ಕೃಷ್ಣೇಗೌಡ ವಕೀಲ ಪ್ರಸಾದ್, ಕುಮಾರ್, ವಿಜಯಕುಮಾರ್, ದೇವಾಲಯದ ಧರ್ಮದರ್ಶಿ ಸಿದ್ದೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.

 

Post Comments (+)