ಚಿಕ್ಕಹಾಲಿವಾಣ: ವೈಭವದ ವೀರಭದ್ರೇಶ್ವರ ಕೆಂಡದಾರ್ಚನೆ

7

ಚಿಕ್ಕಹಾಲಿವಾಣ: ವೈಭವದ ವೀರಭದ್ರೇಶ್ವರ ಕೆಂಡದಾರ್ಚನೆ

Published:
Updated:

ಹೊನ್ನಾಳಿ: ತಾಲ್ಲೂಕಿನ ಚಿಕ್ಕಹಾಲಿವಾಣ ಗ್ರಾಮದಲ್ಲಿ ಶನಿವಾರ ವೀರಭದ್ರಸ್ವಾಮಿ ಗುಗ್ಗಳ ಹಾಗೂ ಕೆಂಡದರ್ಚನೆ ಕಾರ್ಯಕ್ರಮಗಳು ವೈಭವದಿಂದ ನಡೆದವು.

ಶನಿವಾರ ಬೆಳಿಗ್ಗೆ 6ರಿಂದ 10ರವರೆಗೆ ಸ್ವಾಮಿಯ ಗುಗ್ಗಳ ನಡೆಯಿತು. ರಾಣೇಬೆನ್ನೂರಿನ ಪುರವಂತರ ಖಡ್ಗ ಪ್ರದರ್ಶನ ಜನಮನ ಸೂರೆಗೊಂಡಿತು.ತಾಲ್ಲೂಕಿನ ವಿವಿಧೆಡೆಗಳಿಂದ ಹಾಗೂ ರಾಜ್ಯದ ಅನೇಕ ಭಾಗಗಳಿಂದ ಸಹಸ್ರಾರುಪಾಲ್ಗೊಂಡಿದ್ದರು. ಎಂ.ಪಿ. ರಾಜು, ಜಿ.ಪಂ. ಸದಸ್ಯೆ ಉಷಾ ಅಶೋಕ್, ಯಕ್ಕನಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಸ್. ಮಹಾದೇವಪ್ಪ, ಸದಸ್ಯ ರಮೇಶ್‌ನಾಯ್ಕ, ಶಿವಮೊಗ್ಗ ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ತಿಪ್ಪಾನಾಯ್ಕ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.

ಇಂದು ರಥೋತ್ಸವ: ಗ್ರಾಮದ ಶ್ರೀವೀರಭದ್ರಸ್ವಾಮಿ ರಥೋತ್ಸವ ಫೆ. 20ರಂದು ನಡೆಯಲಿದೆ. ನಂತರ ಓಕುಳಿ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry