ಶನಿವಾರ, ಏಪ್ರಿಲ್ 17, 2021
33 °C

ಚಿಕ್ಕೊಪ್ಪ ಗೋಶಾಲೆ:ಸೌಲಭ್ಯಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ತಾಲ್ಲೂಕಿನ ಚಿಕ್ಕೊಪ್ಪ ತಾಂಡಾ ಬಳಿ ಸ್ಥಾಪಿಸಲಾದ ಗೋಶಾಲೆಗೆ ನಿರೀಕ್ಷೆಗೂ ಮೀರಿ ದಾಖಲಾಗುತ್ತಿರುವ ಜಾನುವಾರುಗಳಿಗೆ ತಕ್ಕಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಮುಖ್ಯವಾಗಿ ಇನ್ನೂ ಎರಡು ಶೆಡ್ ನಿರ್ಮಿಸಿ ಜಾನುವಾರುಗಳಿಗೂ ಸೂಕ್ತ ನೆರಳಿನ ವ್ಯವಸ್ಥೆ ಹಾಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಶಿವಪುತ್ರಪ್ಪ ಬೆಲ್ಲದ್ ಆಗ್ರಹಿಸಿದ್ದಾರೆ.ಶುಕ್ರವಾರ ಪಕ್ಷದ ಮುಖಂಡ ಕೆ.ವಿರೂಪಾಕ್ಷಪ್ಪ ಅವರೊಂದಿಗೆ ಗೋಶಾಲೆಗೆ ಭೇಟಿನೀಡಿ ನಂತರ ಮಾತನಾಡಿದ ಅವರು, ಗೋಶಾಲೆಗಳಲ್ಲಿ ಮೇವಿನ ಕೊರತೆ ಇರುವ ಬಗ್ಗೆ ರೈತರಿಂದ ದೂರು ಕೇಳಿಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.ಗೋಶಾಲೆಯಲ್ಲಿ ಸುಮಾರು 2ಸಾವಿರ ಜಾನುವಾರುಗಳಿದ್ದು, ಅದಕ್ಕಾಗಿ 12ಶೆಡ್‌ಗಳನ್ನು ನಿರ್ಮಿಸಲಾಗಿದೆ, ಆದರೂ ಕನಿಷ್ಠ ಪಕ್ಷ ಇನ್ನೂ 2ಶೆಡ್‌ಗಳು ನಿರ್ಮಾಣವಾಗಬೇಕಾಗಿದೆ. ಮಳೆ ಬೀಳದೇ ಇರುವುದರಿಂದ ರೈತರಲ್ಲಿ ಮೇವಿನ ಕೊರತೆ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಗೋಶಾಲೆಗಳತ್ತ ಮುಖಮಾಡಿದ್ದಾರೆ.

 

ಇದರಿಂದ ಸ್ಥಳದ ಅಭಾವ ಉಂಟಾಗಿ ಗಿಡದ ನೆರಳಿನಲ್ಲಿಯೇ ದನಗಳನ್ನು ಕಟ್ಟುವ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ ಹೆಚ್ಚುತ್ತಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಮೇವು ಸಂಗ್ರಹಿಸುತ್ತಿಲ್ಲ, ನೀರಿನ ಸೌಲಭ್ಯ ತೃಪ್ತಿದಾಯಕವಾಗಿದ್ದರೂ ನಿರ್ವಹಣೆ ಕೊರತೆ ಎದ್ದುಕಾಣುತ್ತಿದೆ.

 

ಈಚೆಗೆ ಕಬ್ಬಿನ ಸೊಪ್ಪು ಜಾನುವಾರುಗಳಿಗೆ ಈಡೀ ಈಡೀಯಾಗಿ ಹಾಕುವುದರಿಂದ ಸಾಕಷ್ಟು ನಷ್ಟವಾಗುವ ಸಾಧ್ಯತೆಗಳಿವೆ. ಅದಕ್ಕಾಗಿ ಈ ಹಸಿ ಮೇವನ್ನು ತುಂಡು ತುಂಡು ಕತ್ತರಿಸಿ ಹಾಕುವುದರಿಂದ ನಷ್ಟವಾಗುವುದನ್ನು ತಪ್ಪಿಸಬಹುದಾಗಿದೆ. ಹಾಗೆಯೇ ಮುಂಗಡವಾಗಿ ಹೆಚ್ಚಿನ ಮೇವು ಸಂಗ್ರಹಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.ಆರೋಪ: ಖುರ್ಚಿಗಾಗಿ ಬಡೆದಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ರೈತರು ಹಾಗೂ ಶ್ರೀಸಾಮಾನ್ಯರ ಹಿತ ಕಾಪಾಡುವ ಯಾವ ಅಂಶಗಳು ಅದರ ಗಮನಕ್ಕೆ ಇದ್ದಂತಿಲ್ಲ, ತಮ್ಮ ಅವಧಿ ಮುಗಿಯುತ್ತಾ ಬಂದರೂ ತಿದ್ದುಕೊಳ್ಳದ ಬಿಜೆಪಿ  ಆಡಳಿತ ನಡೆಸುವುದನ್ನು ಸಂಪೂರ್ಣವಾಗಿ ಕೈಬಿಟ್ಟು ಬರೀ ನಾಯಕತ್ವ ಬದಲಾವಣೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ.ಬರಗಾಲದ ತೀವ್ರತೆ ಹೆಚ್ಚುತ್ತಿರುವುದರಿಂದ ಜನತೆ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿಯು ಈ ವರ್ಷವಂತೂ ಜನರನ್ನು ಹಾಗೂ ಜಾನುವಾರುಗಳನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಆಪಾದಿಸಿದರು.ಪಕ್ಷದ ಮುಖಂಡ ಸುಭಾಸ ವದ್ನಾಳ, ಗದ್ದೆಪ್ಪ, ರಾಮಣ್ಣ ಮಾಡ್ಲಗೇರಿ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.