ಬುಧವಾರ, ನವೆಂಬರ್ 20, 2019
21 °C

ಚಿಕ್ಕೋಡಿ: ಎರಡು ನಾಮಪತ್ರ ತಿರಸ್ಕೃತ

Published:
Updated:

ಚಿಕ್ಕೋಡಿ: ಮೇ 5ರಂದು ನಡೆಯಲಿ ರುವ ವಿಧಾನಸಭೆ ಚುನಾವಣೆಗೆ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ 16 ಅಬ್ಯರ್ಥಿಗಳು ಸಲ್ಲಿಸಿದ 21 ನಾಮಪತ್ರ ಗಳಲ್ಲಿ  2 ನಾಮಪತ್ರಗಳು ತಿರಸ್ಕೃತ ಗೊಂಡಿವೆ ಎಂದು ಚುನಾವಣಾಧಿಕಾರಿ ಡಾ.ರುದ್ರೇಶ ಘಾಳಿ ತಿಳಿಸಿದರು.ಗುರುವಾರ ನಡೆದ ನಾಮಪತ್ರಗಳ ಪರಿಶೀಲನೆ ನಡೆಸಲಾಗಿದೆ. ಚಿಕ್ಕೋಡಿ- ಸದಲಗಾ ವಿಧಾನಸಭೆ ಕ್ಷೇತ್ರಕ್ಕೆ ಸಲ್ಲಿಸಿದ ನಾಮಪತ್ರಗಳಲ್ಲಿ ಬಿ. ಫಾರ್ಮ ಇಲ್ಲದ ಕಾರಣದಿಂದ ಜೆಡಿಎಸ್‌ನ ರಾವ ಸಾಹೇಬ ಗುಣಕೆ ಹಾಗೂ ಬಿಜೆಪಿಯ ಅಪ್ಪಾಸಾಹೇಬ ಚೌಗಲೆ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.ಅಂತಿಮವಾಗಿ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರಕ್ಕೆ 14 ಜನ ಅಭ್ಯರ್ಥಿ ಗಳು ಉಳಿದಿದ್ದು 20 ನಾಮಪತ್ರಗಳನ್ನು ಹಿಂಪಡೆಯುವ ದಿನವಾಗಿದೆ.ನಿಪ್ಪಾಣಿ ವಿಧಾನಸಭೆ ಕ್ಷೇತ್ರ:  ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಚುನಾವಣೆಗೆ 19 ಜನರು ಸಲ್ಲಿಸಿದ 26 ನಾಮಪತ್ರಗಳಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡಿದ್ದು ಅಂತಿಮವಾಗಿ 16 ಜನರು ಉಳಿದಿದ್ದಾರೆ. ಎಂದು ಚುನಾವಣಾ ಅಧಿಕಾರಿ ನಿಸಾರ್ ಅಹಮದ್ ತಿಳಿಸಿದ್ದಾರೆ.ಒಂದು ನಾಮಪತ್ರ ತಿರಸ್ಕೃತ

ಬೈಲಹೊಂಗಲ: ಚುನಾವಣೆಗೆ ಸಲ್ಲಿಸಿದ 12 ನಾಮಪತ್ರ ಗಳಲ್ಲಿ ಹನ್ನೊಂದು ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಅಧಿಕಾರಿ ಕೆ.ಎಚ್. ಗುರುಪ್ರಸಾದ ತಿಳಿಸಿದ್ದಾರೆ.3 ನಾಮಪತ್ರ ತಿರಸ್ಕೃತ

ರಾಮದುರ್ಗ: ರಾಮದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಒಟ್ಟು ಮೂರು ನಾಮಪತ್ರಗಳು ತಿರಸ್ಕೃತ ಗೊಂಡಿವೆ ಎಂದು ಚುನಾವಣಾಧಿಕಾರಿ ಬಿ. ಸುರೇಶರಾವ್ ತಿಳಿಸಿದರು.ಪಕ್ಷದ ಬಿ ಪಾರಂ ಲಭ್ಯವಾಗದ ಕಾರಣ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಮಲ್ಲೇಶಿ ಶಿವಲಿಂಗಪ್ಪ ಯಾದವಾಡ, ಜೆಡಿಎಸ್‌ನ ಶಾಸನಗೌಡ ಸಿದ್ದನಗೌಡ ಪಾಟೀಲ ಅವರ ನಾಮಪತ್ರ ತಿರಸ್ಕೃತಗೊಂಡಿವೆ. ಅದೇ ರೀತಿ ಸೂಚಕರ ಸಹಿ ಇಲ್ಲದ ಕಾರಣ ರಾಷ್ಟ್ರೀಯ ಸಮಾಜ ಪಕ್ಷದ ಸುರೇಖಾ ಬೀರಪ್ಪ ಮಿಡಕನಟ್ಟಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಅವರು ಹೇಳಿದರು. ಇನ್ನೂ 13 ಅಭ್ಯರ್ಥಿಗಳ 23 ನಾಮಪತ್ರಗಳು ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಹೇಳಿದರುಒಂದು ನಾಮಪತ್ರ ತಿರಸ್ಕೃತ

ಹುಕ್ಕೇರಿ: ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಚಿವ ಉಮೇಶ್ ಕತ್ತಿ ಸಹೋದರ ಸಂಸದ ರಮೇಶ್ ಕತ್ತಿ `ಬಿ' ಫಾರ್ಮ್ ಲಗತ್ತಿಸದೇ ಇರುವು ದರಿಂದ ಅವರ ನಾಮಪತ್ರ ತಿರಸ್ಕರಿಸ ಲಾಗಿದೆ ಎಂದು ಚುನಾವಣಾಧಿಕಾರಿ ಆರ್.ಜಿ.ನಾಯಕ ತಿಳಿಸಿದ್ದಾರೆ.6 ನಾಮಪತ್ರ ತಿರಸ್ಕೃತ

ಯಮಕನಮರಡಿ (ಪ.ಪಂ.) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವಾನಂದ ಮಸಗುಪ್ಪಿ, ಪರಶುರಾಮ ನಾಯಕ, ಲಗಮಣ್ಣ ಲೆಂಕೆನ್ನವರ, ಬಸವರಾಜ ಹುಂದ್ರಿ ಹಾಗೂ ಜೆಡಿಯುನ ಯಲಗೊಂಡ ನಾಯಕ ಅವರು `ಬಿ' ಫಾರ್ಮ್ ಲಗತ್ತಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿದೆ. ಪಕ್ಷೇತರ ಅಭ್ಯರ್ಥಿ ರಜನೀಶ್ ಆಚಾರ್ಯರ ಸೂಚಕರು ಮತದಾರರ ಪಟ್ಟಿಯ ಮಾಹಿತಿ ಸರಿಯಾಗಿ ನೀಡದ್ದಕ್ಕೆ ತಿರಸ್ಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಶಶಿಧರ ಬಗಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)