ಶುಕ್ರವಾರ, ಜೂನ್ 18, 2021
28 °C

ಚಿಕ್ಕೋಡಿ: ಟೆಕ್ನೋವಿಜನ್ 2ಕೆ12 :91 ವಿಜ್ಞಾನ ಮಾದರಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಚಿದಾನಂದ ಬ.ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ ಐಎಸ್‌ಟಿಇ ಸಹಯೋಗದೊಂದಿಗೆ  ಐದನೇ ರಾಷ್ಟ್ರಮಟ್ಟದ ಪ್ರಬಂಧ ಮಂಡನೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ನೃತ್ಯ ಸ್ಪರ್ಧೆಗಳನ್ನು ಒಳಗೊಂಡ `ಟೆಕ್ನೋವಿಜನ್ 2ಕೆ12~ ಇತ್ತೀಚೆಗೆ ನಡೆಯಿತು.ಬೆಂಗಳೂರು, ಮೈಸೂರು, ಬಾಗಲಕೋಟೆ, ಮಹಾಲಿಂಗಪುರ, ಹುಬ್ಬಳ್ಳಿ, ಹಾವೇರಿ, ಕೊಲ್ಲಾಪುರ, ಸಾಂಗ್ಲಿ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ವಿವಿಧ ಪಾಲಿಟೆಕ್ನಿಕ್‌ಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ  91 ವಿಜ್ಞಾನ ವಸ್ತುಗಳನ್ನು ಪ್ರದರ್ಶಿಸಿದರೆ, ವಿವಿಧ ವಿಷಯಗಳ ಕುರಿತಾಗಿ  141 ಪ್ರಬಂಧಗಳನ್ನು ಮಂಡಿಸಿದರು.

 

ವಿವಿಧ ಪಾಲಿಟೆಕ್ನಿಕ್‌ಗಳಿಂದ ಆಗಮಿಸಿದ 15 ತಂಡಗಳು ಪ್ರಸ್ತುಪಡಿಸಿದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.  ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ಸಂಸದ ರಮೇಶ ಕತ್ತಿ, ಅಶೋಕ ಬಾಗೇವಾಡಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ, ಪ್ರಾಚಾರ್ಯ ಬಿ.ಎ.ಪೂಜಾರಿ ಮುಂತಾದವರು ವಿಜ್ಞಾನ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಪರ್ಧಾ ವಿಜೇತರು: ವಿಜ್ಞಾನ ವಸ್ತು ಪ್ರದರ್ಶನ- ಮೆಕ್ಯಾನಿಕಲ್: ಬೆಳಗಾವಿಯ ಎಂ.ಎಲ್.ಭರತೇಶ ಪಾಲಿಟೆಕ್ನಿಕ್(ಪ್ರ),  ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ (ದ್ವಿ).ಅಟೋಮೋಬೈಲ್: ಬೆಳಗಾವಿಯ ಎಂ.ಎಲ್. ಭರತೇಶ ಪಾಲಿಟೆಕ್ನಿಕ್ (ಪ್ರ), ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಸಿ.ಐ.ಎಂ.ಪಾಲಿಟೆಕ್ನಿಕ್ (ದ್ವಿ).ಮೆಕ್ಯಾಟ್ರಾನಿಕ್ಸ್: ಚಿಕ್ಕೋಡಿಯ ಸಿ.ಬಿ.ಕೋರೆ ಪಾಲಿಟೆಕ್ನಿಕ್ (ಪ್ರ), ಬೆಳಗಾವಿಯ ಎಂ.ಎಲ್.ಭರತೇಶ ಪಾಲಿಟೆಕ್ನಿಕ್(ದ್ವಿ).ಕಂಪ್ಯೂಟರ್ ಸೈನ್ಸ್: ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಸಿ.ಐ.ಎಂ.ಪಾಲಿಟೆಕ್ನಿಕ್ (ಪ್ರ),  ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ (ದ್ವಿ).ಇ- ಸಿ/ಇ-ಇ:  ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಸಿ.ಐ.ಎಂ.ಪಾಲಿಟೆಕ್ನಿಕ್ ಮತ್ತು ಬೆಳಗಾವಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್(ಪ್ರ), ಬೆಳಗಾವಿಯ ಎಂ.ಎಲ್. ಭರತೇಶ ಪಾಲಿಟೆಕ್ನಿಕ್ (ದ್ವಿ).ಸಿವಿಲ್/ಆರ್ಕಿಟೆಕ್ಚರ್: ಬೆಳಗಾವಿಯ ವಸಂತರಾವ ಪೋತದಾರ ಪಾಲಿಟೆಕ್ನಿಕ್ (ಪ್ರ), ನಿಡಸೋಶಿಯ ಎಸ್‌ಜೆಪಿಎನ್ ಟ್ರಸ್ಟ್ ಪಾಲಿಟೆಕ್ನಿಕ್ ಮತ್ತು ಹಾವೇರಿಯ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್(ದ್ವಿ).ಎಂಟಿಟಿ: ನಿಡಸೋಶಿಯ ಎಸ್‌ಜೆಪಿಎನ್ ಟ್ರಸ್ಟ್ ಪಾಲಿಟೆಕ್ನಿಕ್ (ಪ್ರ).ನೃತ್ಯ ಸ್ಪರ್ಧೆ:
ಮಹಾರಾಷ್ಟ್ರ ಯಡ್ರಾವದ ಶರದ ಪಾಲಿಟೆಕ್ನಿಕ್ ತಂಡ (ಪ್ರ), ನಿಡಸೋಶಿಯ ಎಸ್‌ಜೆಪಿಎನ್ ಟ್ರಸ್ಟ್ ಪಾಲಿಟೆಕ್ನಿಕ್,ಬೈಲಹೊಂಗಲದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್, ಚಿಕ್ಕೋಡಿಯ ಸಿ.ಬಿ.ಕೋರೆ ಪಾಲಿಟೆಕ್ನಿಕ್(ದ್ವಿ) ಮತ್ತು  ದಾವಣಗೆರೆಯ ಡಿಆರ್‌ಆರ್(ಸರ್ಕಾರಿ) ಪಾಲಿಟೆಕ್ನಿಕ್, ಬೆಳಗಾವಿಯ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್, ಹಾವೇರಿಯ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್(ತೃ) ಸ್ಥಾನ ಗಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.