ಗುರುವಾರ , ಏಪ್ರಿಲ್ 15, 2021
28 °C

ಚಿಟ್ಟಾಣಿ ಯಕ್ಷಗಾನ ಸಪ್ತಾಹ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದಿನಿಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹ ಆರಂಭವಾಗಲಿದ್ದು ನ.9ರ ವರೆಗೆ ಪ್ರತಿ ದಿನ ಸಂಜೆ 6.30ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪರ್ಯಾಯ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಸಂಜೆ ಆರು ಗಂಟೆಗೆ ಸಪ್ತಾಹವನ್ನು ಉದ್ಘಾಟಿಸುವರು.ಶ್ರೀಕೃಷ್ಣ ಸಂಧಾನದಲ್ಲಿ ಚಿಟ್ಟಾಣಿ ಅವರು ಕೌರವ, ಶ್ವೇತಕುಮಾರ ಚರಿತ್ರೆಯಲ್ಲಿ ಶ್ವೇತಕುಮಾರ, ಬಬ್ರುವಾಹನ ಕಾಳಗದಲ್ಲಿ ಅರ್ಜುನ, ಚಿತ್ರಾಕ್ಷಿ ಕಲ್ಯಾಣದಲ್ಲಿ ರುದ್ರಕೋಪ, ಭೀಷ್ಮ ಪರ್ವದಲ್ಲಿ ಭೀಷ್ಮ, ಸುಭದ್ರಾ ಕಲ್ಯಾಣದಲ್ಲಿ ಬಲರಾಮ ಮತ್ತು ಭಸ್ಮಾಸುರ ಮೋಹಿನಿಯಲ್ಲಿ ಭಸ್ಮಾಸುರನಾಗಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಪಾತ್ರ ನಿರ್ವಹಿಸುವರು.ಯಕ್ಷಗಾನ,ದಿನಾಂಕ ಮತ್ತು ಕಲಾವಿದರ ವಿವರ ಈ ಕೆಳಕಂಡಂತಿದೆ:

ನ. 3ರಂದು ಶ್ರೀಕೃಷ್ಣ ಸಂಧಾನ- ವಿದ್ವಾನ್ ಗಣಪತಿ ಭಟ್, ಶಂಕರ ಭಾಗವತ ಯಲ್ಲಾಪುರ, ಮಾಧವ ಹೆಗಡೆ ಕಪ್ಪೆಕೆರೆ, ಭಾಸ್ಕರ ಜೋಶಿ ಶಿರಳಗಿ, ಆರ‌್ಗೋಡು ಮೋಹನದಾಸ ಶಣೈ.ನ.4ರಂದು ಶ್ವೇತಕುಮಾರ ಚರಿತ್ರೆ - ಸುಬ್ರಹ್ಮಣ್ಯ ಧಾರೇಶ್ವರ, ಶಂಕರ ಭಾಗವತ ಯಲ್ಲಾಪುರ, ಗೋಡೆ ನಾರಾಯಣ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೆಪಿ. ಹಾಸ್ಯಗಾರ ಕರ್ಕಿ, ಸುನ್ರಹ್ಮಣ್ಯ ಹೆಗಡೆ ಯಲಗುಪ್ಪಾ, ಶಂಕರ ಹೆಗಡೆ ನೀಲಕೋಡು, ಬಾಲಕೃಷ್ಣ ನಾಯಕ್.ನ.5ರಂದು ಬಬ್ರುವಾಹನ ಕಾಳಗ- ಸುಬ್ರಹ್ಮಣ್ಯ ಧಾರೇಶ್ವರ, ಶಂಕರ ಭಾಗವತ ಯಲ್ಲಾಪುರ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ಗಣೇಶ್ ನಾಯ್ಕ ಮುಗ್ವಾ.ನ.6ರಂದು ಚಿತ್ರಾಕ್ಷಿ ಕಲ್ಯಾಣ-  ವಿದ್ವಾನ್ ಗಣಪತಿ ಭಟ್, ಎ.ಪಿ ಪಾಠಕ್, ಥಂಡಿಮನೆ ಶ್ರೀಪಾದ ಭಟ್, ಮಂಟಪ ಪ್ರಭಾಕರ ಉಪಾಧ್ಯ, ಕೃಷ್ಣಮೂರ್ತಿ ಉರಾಳ.ನ.7ರಂದು ಭೀಷ್ಮಪರ್ವ- ವಿದ್ವಾನ್ ಗಣಪತಿ ಭಟ್, ಎ.ಪಿ ಪಾಠಕ್, ನರಸಿಂಹ ಚಿಟ್ಟಾಣಿ.

ನ.8ರಂದು ಸುಭದ್ರಾ ಕಲ್ಯಾಣ - ಕೊಳಗಿ ಕೇಶವ ಹೆಗಡೆ, ಸುನೀಲ್ ಭಂಡಾರಿ, ಕೃಷ್ಣಯಾಜಿ ಬಳ್ಕೂರು, ಶಂಕರ ಹೆಗಡೆ ನೀಲಕೋಡು.ನ.9ರಂದು ಭಸ್ಮಾಸುರ ಮೋಹಿನಿ - ಕೊಳಗಿ ಕೇಶವ ಹೆಗಡೆ, ಸುನೀಲ್ ಭಂಡಾರಿ, ಕೃಷ್ಣಯಾಜಿ ಬಳ್ಕೂರು, ಶಂಕರ ಹೆಗಡೆ ನೀಲಕೋಡು, ಎಂ.ಎಲ್. ಸಾಮಗ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.