ಬುಧವಾರ, ಡಿಸೆಂಬರ್ 11, 2019
24 °C

ಚಿಣ್ಣರಿಗೆ ಜೀವನ್ ಅಂಕುರ್

Published:
Updated:
ಚಿಣ್ಣರಿಗೆ ಜೀವನ್ ಅಂಕುರ್ಹೊಸ, ಹೊಸ ವಿಮೆ ಉತ್ಪನ್ನ ಮತ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಸದಾ ಹೊಸತನ ಜಪಿಸುವ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಈಗ ಮಕ್ಕಳ ಭವಿಷ್ಯಕ್ಕೆ ಭದ್ರತೆ ಒದಗಿಸುವ ವಿಶಿಷ್ಟ ವಿಮೆ ಯೋಜನೆ  ಪರಿಚಯಿಸಿದೆ.ಪಾಲಕರೂ ಇದಕ್ಕೆ ಕೈಜೋಡಿಸಿದರೆ ಮಕ್ಕಳ ಭವಿಷ್ಯ ಇನ್ನಷ್ಟು ಸುಭದ್ರವಾಗಲಿದೆ.

ಮಗುವಿನ ಶಿಕ್ಷಣ ವೆಚ್ಚ ಮತ್ತಿತರ ಹಣಕಾಸು ಅಗತ್ಯಗಳನ್ನು ಈಡೇರಿಸಲು ನೆರವಾಗುವ `ಜೀವನ್ ಅಂಕುರ್~ ಹೆಸರಿನ ಹೊಸ ವಿಮೆ ಪಾಲಿಸಿ  ಜಾರಿಗೆ ಬಂದ ಅರ್ಧಗಂಟೆಯಲ್ಲಿಯೇ ಅನೇಕರು ಪಾಲಿಸಿ ಮಾಡಲು ಮುಂದೆ ಬಂದಿರುವುದು ಇದರ ಜನಪ್ರಿಯತೆಗೆ ಕನ್ನಡಿ ಹಿಡಿದಿದೆ.ಮಕ್ಕಳಿಗಾಗಿಯೇ ವಿಶೇಷವಾಗಿ ಈ ಯೋಜನೆ ರೂಪಿಸಲಾಗಿದೆ. ಸಾಂಪ್ರದಾಯಿಕ ಲಾಭದಾಯಕ ಪಾಲಿಸಿಯಾಗಿರುವ `ಜೀವನ್ ಅಂಕುರ್~, 17 ವರ್ಷವರೆಗಿನ ಮಕ್ಕಳಿಗೆ  ವಿಮೆ ಸೌಲಭ್ಯ ಒದಗಿಸಲಿದೆ.ಮಗುವಿನ ಶಿಕ್ಷಣ, ಮದುವೆ ಮತ್ತಿತರ ಸಂದರ್ಭಗಳಲ್ಲಿ ಪಾಲಕರು ತಾವು ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ಇತರರ ಮೇಲೆ ಅವಲಂಬಿಸದೇ ತಾವೇ ಸ್ವತಃ ನಿರ್ವಹಿಸಲು ಈ ಯೋಜನೆ ನೆರವಾಗಲಿದೆ. ಈ ಪಾಲಿಸಿಯು ಪಾಲಕರಿಗೂ ಜೀವ ವಿಮೆ ಸೌಲಭ್ಯ ಒದಗಿಸಲಿದೆ.ಪಾಲಿಸಿಯ ನಾಮಕರಣ (ನಾಮಿನಿ) ಸೌಲಭ್ಯವು ಮಗುವಿನ ಹೆಸರಿನಲ್ಲಿಯೇ ಇರುವುದರಿಂದ, ಪಾಲಿಸಿ ತೆಗೆದುಕೊಂಡ ತಂದೆ ಅಥವಾ ತಾಯಿ ಆಕಸ್ಮಿಕವಾಗಿ ಮೃತಪಟ್ಟರೆ ಮಗುವಿಗೆ ಪರಿಹಾರ ಮೊತ್ತದ  ಪೂರ್ಣ ಲಾಭ ಲಭಿಸಲಿದೆ.ಪಾಲಿಸಿ ಜಾರಿಯಲ್ಲಿ ಇರುವ ಅವಧಿಯಲ್ಲಿ ಒಂದು ವೇಳೆ ತಂದೆ ಅಥವಾ ತಾಯಿ ಮೃತಪಟ್ಟರೆ, ಪಾಲಿಸಿಯ ಪೂರ್ಣ ಮೊತ್ತವನ್ನು (basic sum assured) ತಕ್ಷಣಕ್ಕೆ ಪಾವತಿಸಲಾಗುವುದು.ಜತೆಗೆ ಪಾಲಿಸಿ ಮೊತ್ತದ ಶೇ 10ರಷ್ಟನ್ನು ಪಾಲಿಸಿ ಅವಧಿಯ ಉಳಿದ ವರ್ಷಗಳ ಉದ್ದಕ್ಕೂ ಪ್ರತಿ ವರ್ಷಕ್ಕೊಮ್ಮೆ ಮಗುವಿಗೆ ನೀಡಲಾಗುವುದು.ಉದಾಹರಣೆಗೆ: ಪಾಲಿಸಿ ತೆಗೆದುಕೊಂಡ ಕ್ಷಣದಿಂದಲೇ ವಿಮೆ ಸೌಲಭ್ಯ ಜಾರಿಗೆ ಬರುತ್ತದೆ. ್ಙ 1 ಲಕ್ಷದ ವಿಮೆ ಪಾಲಿಸಿ ತೆಗೆದುಕೊಂಡ ಅರ್ಧ ಗಂಟೆ ಅವಧಿಯಲ್ಲಿಯೇ ಪಾಲಿಸಿದಾರ ವ್ಯಕ್ತಿ (ತಂದೆ / ತಾಯಿ) ಆಕಸ್ಮಿಕವಾಗಿ ಮೃತಪಟ್ಟರೆ, ತಕ್ಷಣಕ್ಕೆ ್ಙ  1 ಲಕ್ಷ ಪರಿಹಾರವನ್ನು ಮಗುವಿನ ಹೆಸರಿಗೆ ವರ್ಗಾಯಿಸಲಾಗುತ್ತದೆ. ಜತೆಗೆ, ಪಾಲಿಸಿಗೆ ಒಂದು ವರ್ಷ ತುಂಬಿದ ನಂತರ ಪಾಲಿಸಿ ಮೊತ್ತದ ಶೇ 10ರಷ್ಟು ಮೊತ್ತವಾದ ್ಙ 10 ಸಾವಿರಗಳನ್ನು (್ಙ 1ಲಕ್ಷ ವಿಮೆ ಪಾಲಿಸಿ ಲೆಕ್ಕಾಚಾರ) ಪ್ರತಿ ವರ್ಷ ಮಗುವಿಗೆ ನೀಡಲಾಗುವುದು. ಇದರಿಂದ ಮಗುವಿನ ಶಿಕ್ಷಣವು ಯಾವುದೇ ಹೆಚ್ಚುವರಿ ಹೊರೆ ಇಲ್ಲದೇ ಅಬಾಧಿತವಾಗಿ ಮುಂದುವರೆಸಲು ನೆರವಾಗುತ್ತದೆ.ಪಾಲಕರ ಜೀವಕ್ಕೆ ಯಾವುದೇ ಅಪಾಯ ಒದಗದಿದ್ದರೆ, ಪಾಲಿಸಿ ಪೂರ್ಣಗೊಂಡ ನಂತರ ವಿಮೆಯ  ಮೂಲ ಮೊತ್ತ ಮತ್ತು ಪಾಲಿಸಿಯ ಕಂತಿನ ಹಣವನ್ನು ಇತರೆಡೆ ಹೂಡಿಕೆ ಮಾಡಿದ್ದರಿಂದ  ಪಾಲಿಸಿ ಅವಧಿ ಉದ್ದಕ್ಕೂ ಬರುವ ಲಾಭದ ಮೊತ್ತ (loyalty addition)  ಸೇರಿಸಿ ನೀಡಲಾಗುವುದು. ಇದರಿಂದ ಮಕ್ಕಳು ತಮ್ಮ ಉನ್ನತ ವ್ಯಾಸಂಗ ಮುಂದುವರೆಸಲು ಅಥವಾ  ವೃತ್ತಿ ಬದುಕು ಆರಂಭಿಸಲು ಅಗತ್ಯವಾದ ಹಣಕಾಸಿನ ನೆರವು ಒದಗಿಸಲಿದೆ.ಅಪಘಾತ ವಿಮೆ ಪರಿಹಾರ ಮತ್ತು ತೀವ್ರ ಸ್ವರೂಪದ ಅನಾರೋಗ್ಯ ಪರಿಹಾರ ಸೌಲಭ್ಯವೂ  ಪಾಲಕರಿಗೆ ದೊರೆಯಲಿದೆ. ಇದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.ಮಗು, ತನ್ನೆಲ್ಲ ಅಗತ್ಯಗಳಿಗೆ ಪಾಲಕರನ್ನೇ ನೆಚ್ಚಿಕೊಂಡಿರುತ್ತದೆ. ಮಗು ಬೆಳೆದಂತೆಲ್ಲ ಅದರ ಹಣಕಾಸಿನ ಅಗತ್ಯಗಳೂ ಹೆಚ್ಚುತ್ತವೆ. ಒಂದು ವೇಳೆ ಪಾಲಕರು ಆಕಸ್ಮಿಕವಾಗಿ ಮೃತಪಟ್ಟರೆ ಮಗುವಿನ ಹಣಕಾಸಿನ ಅಗತ್ಯಗಳನ್ನು ಈಡೇರಿಸಲು ಈ ಪಾಲಿಸಿ ನೆರವಿಗೆ ಬರುತ್ತದೆ.ಮಕ್ಕಳು ಬೆಳೆದು ದೊಡ್ಡವರಾಗಿ ದುಡಿಯಲು ಆರಂಭಿಸಿ ಬದುಕಿನಲ್ಲಿ ನೆಲೆ ಕಂಡುಕೊಳ್ಳುವವರೆಗೆ ಅವರ ಹಣಕಾಸಿನ ಅಗತ್ಯಗಳನ್ನು ಈಡೇರಿಸಲೂ ಈ ಯೋಜನೆ ನೆರವಾಗುತ್ತದೆ. ಒಂದು ವೇಳೆ ಮಗುವಿಗೆ ಏನಾದರೂ ಅವಘಡ ಸಂಭವಿಸಿದರೆ, ಪಾಲಕರ ಇನ್ನೊಂದು ಮಗುವಿಗೆ ಅಥವಾ ದತ್ತು  ತೆಗೆದುಕೊಳ್ಳುವ ಮಗುವಿಗೂ ಈ ಪಾಲಿಸಿ ಅನ್ವಯಿಸುವ ಅವಕಾಶ ಇದೆ ಎಂದು `ಎಲ್‌ಐಸಿ~ಯ ಮಾರುಕಟ್ಟೆ ಮ್ಯಾನೇಜರ್ ಎನ್.  ಪ್ರಕಾಶ್ ಸ್ಪಷ್ಟಪಡಿಸುತ್ತಾರೆ.

 

ಒಂದೇ ಕಂತಿನಲ್ಲಿಯೂ (prem­ium)  ಹಣ ಕಟ್ಟಬಹುದು. ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ತಿಂಗಳಿಗೊಮ್ಮೆ ಕೂಡ ಕಂತು ತುಂಬಬಹುದು. ವಾರ್ಷಿಕ ಕಂತಿಗೆ ಶೇ 2ರಷ್ಟು ಮತ್ತು ಅರ್ಧವಾರ್ಷಿಕ ಕಂತಿಗೆ ಶೇ 1ರಷ್ಟು ರಿಯಾಯ್ತಿ ಇರಲಿದೆ.ಮಗುವಿಗೆ 18 ವರ್ಷ ತುಂಬುವ ಹಿಂದಿನ ದಿನವೂ ಈ ಪಾಲಿಸಿ ತೆಗೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಪಾಲಿಸಿ ಅವಧಿ 8 ವರ್ಷ ಮಾತ್ರ ಇರುತ್ತದೆ. ಒಂದು ವರ್ಷದ ಒಳಗಿನ ಮಗುವಿಗೆ ಪಾಲಿಸಿ ಅವಧಿ 25 ವರ್ಷ ಆಗಿರುತ್ತದೆ ಎಂದು ಎನ್. ಪ್ರಕಾಶ್ ತಿಳಿಸುತ್ತಾರೆ.

 

ಇತರ ಆಕರ್ಷಣೆಗಳು

-ಪಾಲಕರೆಲ್ಲ ಈ ಪಾಲಿಸಿ ಖರೀದಿಸುವುದು ಜಾಣತನದ ನಿರ್ಧಾರ

-ಪಾಲಕರಿಗೆ ಜೀವ ವಿಮೆ ಸೌಲಭ್ಯ; ಮಗು ಫಲಾನುಭವಿ

-ವಿಮೆ ಲಾಭ: ವಿಮೆ ಮೊತ್ತ + ಆದಾಯ ಲಾಭ (income benefit)  + ಪರಿಪಕ್ವತೆಯ ಲಾಭ (maturity benefits)

- ಪರಿಪಕ್ವತೆಯ ಲಾಭ= ವಿಮೆ ಮೊತ್ತ +  ಹೂಡಿಕೆಯಿಂದ ಬರುವ ಲಾಭ ಸೇರ್ಪಡೆಮೂರು ನಿಬಂಧನೆಗಳು

 1. ಅಪಘಾತ ವಿಮೆ ಪರಿಹಾರ 2. ತೀವ್ರ ಸ್ವರೂಪದ ಕಾಯಿಲೆಗೆ ಪರಿಹಾರ ಮತ್ತು 3. ತೀವ್ರ ಸ್ವರೂಪದ ಕಾಯಿಲೆ ಪರಿಹಾರದಡಿ, ಕಂತು ರದ್ದು ಪರಿಹಾರ. ಈ ಸೌಲಭ್ಯಗಳನ್ನು ಪಡೆಯಲು ಪಾಲಿಸಿದಾರರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.-ಕಂತು ನಿರ್ಧರಿಸುವ ವಿಧಾನ

-ಮಗುವಿನ ವಯೋಮಿತಿ ಆಧರಿಸಿ ವಿಮೆ ಕಂತಿನ ಮೊತ್ತ ನಿಗದಿಪಡಿಸಲಾಗುವುದು. ಕಂತಿನ ಹಣಕ್ಕೆ ಸೇವಾ ತೆರಿಗೆ ಅನ್ವಯಗೊಳ್ಳುವುದು-ಪಾಲಿಸಿ ಅವಧಿ ಎಷ್ಟು?

- 2 ವರ್ಷದ ಮಗುವಿಗೆ ಕನಿಷ್ಠ 16 ವರ್ಷದಿಂದ 23 ವರ್ಷಗಳವರೆಗೆ

-ಪಾಲಿಸಿ ಅಂತ್ಯಕ್ಕೆ ಸಿಗುವ ಲಾಭಗಳು

-  ಪಾಲಿಸಿ ಅವಧಿ ಪೂರ್ಣಗೊಂಡಾಗ  (maturity) ಮೂಲ ವಿಮೆ ಮೊತ್ತದ ಜತೆಗೆ `ಎಲ್‌ಐಸಿ~ಯು ಘೋಷಿಸಿದ್ದ ಹೂಡಿಕೆಯಿಂದ ಬರುವ ಲಾಭವನ್ನು(loyalty addition)  ನೀಡಲಾಗುವುದು.-ಪಾಲಿಸಿಯನ್ನು ಮರಳಿ ಒಪ್ಪಿಸಬಹುದೇ?

-ಹೌದು.  ಕನಿಷ್ಠ ಮೂರು ವರ್ಷಗಳ ಕಾಲ ನಿರಂತರವಾಗಿ ಕಂತು ತುಂಬಿದ್ದರೆ, ಹಣದ ತುರ್ತು ಅಗತ್ಯ ಉದ್ಭವಿಸಿದ್ದರೆ ಪಾಲಕರು ತಮಗೆ ಈ ಪಾಲಿಸಿ ಬೇಡ ಎಂದು (policy be surr­ender) ನಿಗಮಕ್ಕೆ ಮರಳಿ ಒಪ್ಪಿಸಬಹುದು. ಒಂದೇ ಬಾರಿ ಕಂತು ತುಂಬಿದ್ದರೆ, ಒಂದು ವರ್ಷದ ನಂತರ ಮರಳಿಸಬಹುದು. 

 

ನಿಯಮಗಳು

-ಹುಟ್ಟಿದ ಮಗುವಿನಿಂದ 17 ವರ್ಷದವರೆಗೆ

-ಪಾಲಕರ ಕನಿಷ್ಠ ವಯೋಮಿತಿ 18. ಗರಿಷ್ಠ 50 ವರ್ಷ

-ಮಗುವಿನ ವಯೋಮಿತಿ ಆಧರಿಸಿ ಪಾಲಿಸಿ ಅವಧಿ ನಿಗದಿ

-ಪಾಲಿಸಿ ಅವಧಿ ಗರಿಷ್ಠ 25 ವರ್ಷ. ಕನಿಷ್ಠ 8 ವರ್ಷ

-ಕನಿಷ್ಠ ವಿಮೆ ಪರಿಹಾರ ಮೊತ್ತ (sum assured) ರೂ. 1 ಲಕ್ಷ

-ವಿಮೆ ಗರಿಷ್ಠ ಮಿತಿ ನಿಗದಿಪಡಿಸಲಾಗಿಲ್ಲ


 

ಪ್ರತಿಕ್ರಿಯಿಸಿ (+)