ಚಿಣ್ಣರೊಂದಿಗೆ ಗಣ್ಯರ ರಕ್ಷಾ ಬಂಧನ

7

ಚಿಣ್ಣರೊಂದಿಗೆ ಗಣ್ಯರ ರಕ್ಷಾ ಬಂಧನ

Published:
Updated:
ಚಿಣ್ಣರೊಂದಿಗೆ ಗಣ್ಯರ ರಕ್ಷಾ ಬಂಧನ

ನವದೆಹಲಿ (ಐಎಎನ್‌ಎಸ್):  ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಶನಿವಾರ  ಮಕ್ಕಳ ಜೊತೆ ರಕ್ಷಾ ಬಂಧನವನ್ನು ಆಚರಿಸಿದರು.ಭಿನ್ನ ಸಾಮರ್ಥ್ಯದ  ಮಕ್ಕಳೂ ಈ ಸಂದರ್ಭದಲ್ಲಿ ಹಾಜರಿದ್ದರು. ದೆಹಲಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಪಂಜಾಬ್, ಹರಿಯಾಣ, ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಶಾಲೆಗಳ 120 ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದಲ್ಲಿ ಸಂಭ್ರಮದ ರಾಖಿ ಹಬ್ಬಕ್ಕೆ ಸಾಕ್ಷಿಯಾದರು. ಪ್ರಧಾನ ಮಂತ್ರಿ  ತಮ್ಮ ಸರ್ಕಾರಿ ನಿವಾಸದಲ್ಲಿ ಮಕ್ಕಳೊಂದಿಗೆ ಸಮಾನವಾಗಿ ಬೆರೆತು ರಕ್ಷಾ ಬಂಧನ ಆಚರಿಸಿದರು. ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ  ಸಹ ಮಕ್ಕಳಿಗೆ ಸಿಹಿ ಹಂಚುವ ಮೂಲಕ ರಕ್ಷಾ ಬಂಧನ ಆಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry