ಚಿಣ್ಣರ ಕಚಗುಳಿಗೆ ಸ್ನೋವೈಟ್...

7

ಚಿಣ್ಣರ ಕಚಗುಳಿಗೆ ಸ್ನೋವೈಟ್...

Published:
Updated:

ಒಂದು ಕಾಲದಲ್ಲಿ ಮನೆ ಮುಂದೆ ವಿಶಾಲ ಅಂಗಳವಿರುತ್ತಿತ್ತು. ಮನೆ ತುಂಬಾ ಮಕ್ಕಳು ಕಣ್ಣಾಮುಚ್ಚಾಲೆ, ಕುಂಟೋಬಿಲ್ಲೆ ಆಟ ಆಡುತ್ತಿದ್ದ ಮಕ್ಕಳು ಈಗ ಕಂಪ್ಯೂಟರ್ ಗೇಮ್‌ಗಳಲ್ಲಿ ಬ್ಯುಸಿ. ಅಷ್ಟಕ್ಕೂ ಈಗ ಮನೆ ಮುಂದೆ ಅಂಗಳವೂ ಇಲ್ಲ.ಮನೆ ತುಂಬಾ ಮಕ್ಕಳೂ ಇಲ್ಲ.ಟೀವಿ ಪರದೆಯಿಂದಾಚೆ ಮಕ್ಕಳನ್ನು ತಂದು ಅವರಲ್ಲಿ ಹಾಸ್ಯ ಭಾವನೆ ಬಿತ್ತುವುದರ ಜೊತೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಇಂಡಿಗೋ ಕಿಡ್ಸ್ ಎಜುಟೇನ್‌ಮೆಂಟ್ ಈಗ ಬೆಂಗಳೂರಿಗೆ ಬಂದಿದೆ.

ಮುಂಬೈನ ವೃತ್ತಿಪರ ತಂಡದವರು ಮಕ್ಕಳನ್ನು ನಗೆ ಹೊನಲಲ್ಲಿ ತೇಲಿಸಲು `ಸ್ನೋ ವೈಟ್ ಅಂಡ್ ನಾಟಿ ಎಲ್ವೆಸ್~ ಎಂಬ ಕಾಮಿಕ್ ಶೋ ಇದೇ (ಫೆಬ್ರುವರಿ) 18ರಂದು ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದಾರೆ.`ಟೀವಿಯೊಂದೇ ಮನರಂಜನೆ ನೀಡುವ ಮಾಧ್ಯಮವಲ್ಲ. ಇಂದಿನ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಅವರಿಗೆ ಹಾಸ್ಯದೊಂದಿಗೆ ಶಿಕ್ಷಣ ನೀಡುವ ಪ್ರಯತ್ನ ನಮ್ಮದು. ಈಗಾಗಲೇ ಮುಂಬಯಿಯಲ್ಲಿ ಸಾಕಷ್ಟು ಕಾರ್ಯಕ್ರಮ ನೀಡಿದ್ದೇವೆ. ಮಕ್ಕಳು ತುಂಬಾನೆ ಇಷ್ಟಪಟ್ಟಿದ್ದಾರೆ. ಅವರನ್ನು ನಗಿಸುವುದರಲ್ಲಿ ಸಿಗುವ ಖುಷಿಯೇ ಬೇರೆ~ ಎಂದು ಹೇಳುತ್ತಾರೆ ಇಂಡಿಗೋ ಕಿಡ್ಸ್‌ನ ರೂವಾರಿ ಪಿಂಕಿ.ಈಗ ಬೆಂಗಳೂರಿನಲ್ಲಿ ಈ ಶೋ ಆಯೋಜಿಸುತ್ತಿರುವ ಪಿಂಕಿ ಹೇಳುವಂತೆ ಇದಕ್ಕೂ ಮೊದಲು 2006ರಲ್ಲಿ ಇದೇ ರೀತಿಯ ಒಂದು ಕಾರ್ಯಕ್ರಮ ಮಾಡಿದ್ದರು. ಮಕ್ಕಳನ್ನು ನಗಿಸುವುದಲ್ಲದೇ ಅವರನ್ನು ವಿಚಾರಶೀಲರನ್ನಾಗಿ ಮಾಡಲು, ಟೀವಿಯಿಂದ ಅವರನ್ನು ಹೊರತರಲು ಈ ಕಾಮಿಕ್ ಶೋ ಸಹಾಯಕ. ಇದರಲ್ಲಿ ನೃತ್ಯ, ಸಂವಾದ, ಮನರಂಜನೆ, ಶಿಕ್ಷಣ ಎಲ್ಲವೂ ಇದೆ. ಹಾಗಾಗಿ ಮಕ್ಕಳ ಮನರಂಜಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎನ್ನುತ್ತಾರೆ ಪಿಂಕಿ.ಸ್ನೋ ವೈಟ್ ಆಂಡ್ ನಾಟಿ ಎಲ್ವೆಸ್ ಕತೆ ಸಹ ಮಕ್ಕಳ ಮನಸ್ಸಿಗೆ ಮುದ ನೀಡುವಂತದ್ದು. ರಾಜಕುಮಾರ, ರಾಜಕುಮಾರಿ ಕತೆ ಹೇಳಲು ಶುರು ಮಾಡಿದರೆ ಪುಟ್ಟ ಮಕ್ಕಳು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಾರೆ. ಇದೇ ವಿಷಯವಿಟ್ಟುಕೊಂಡು ಅಜ್ಜಿಯ ಸ್ಥಾನ ತುಂಬುವ ಕಾಯಕದಲ್ಲಿ ಇಂಡಿಗೋ ಕಿಡ್ಸ್ ಈಗಾಗಲೇ ಮುಂಬಯಿಯಲ್ಲಿ ಎಲ್ಲರ ಮನಗೆದ್ದಿದೆ. ಈ ಕಾರ್ಯಕ್ರಮದ ಎಂಟು ಮಂದಿ ಕಲಾವಿದರು ತಮ್ಮ ಅದ್ಭುತ ಅಭಿನಯದಿಂದ ಮಕ್ಕಳನ್ನು ನಗುವಿನ ಕಡಲಲ್ಲಿ ತೇಲಿಸಿದ್ದಾರೆ. ಕುಟುಂಬದವರೆಲ್ಲರೂ ಸೇರಿ ಈ ಕಾರ್ಯಕ್ರಮವನ್ನು ನೋಡಬಹುದು.ಫೆಬ್ರುವರಿ 18 ಶನಿವಾರ ಸಂಜೆ 4.30 ಮತ್ತು 6.30 ಕ್ಕೆ ಚೌಡಯ್ಯ ಸ್ಮಾರಕ ಭವನದ ಸಭಾಂಗಣದಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry