ಗುರುವಾರ , ಫೆಬ್ರವರಿ 25, 2021
30 °C

ಚಿಣ್ಣರ ಕುಂಚಗಳಲ್ಲಿ ಮೂಡಿದ ಜಿಎಸ್‌ಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಣ್ಣರ ಕುಂಚಗಳಲ್ಲಿ ಮೂಡಿದ ಜಿಎಸ್‌ಎಸ್‌

ನಾಗಮಂಗಲ :  ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ನಮ್ಮ ನಡುವೆ ಇಲ್ಲ. ಆದರೆ ಅವರು ಹೊತ್ತಿಸಿದ ಸಾಹಿತ್ಯದ ಹಣತೆಯ ಬೆಳಕು ಮಾತ್ರ ಎಂದಿನಂತೆ ಪ್ರಖರವಾಗಿ ಬೆಳಗುತ್ತಿದೆ ಎಂದು ಕನ್ನಡ ಸಂಘದ ಎಂ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.ಅವರು ಈಚೆಗೆ ತಾಲ್ಲೂಕಿನ ಬೆಳ್ಳೂರಿನ ಎಎಲ್‌ಕೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸಂಘದ ವತಿಯಿಂದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಪ್ರಾಂಶುಪಾಲರಾದ ಜಿ.ಇ. ಶಕುಂತಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲೆಯ ವಿದ್ಯಾರ್ಥಿಗಳು ಜಿ.ಎಸ್‌. ಶಿವರುದ್ರಪ್ಪನವರ ಬದುಕಿನ ವಿವಿಧ ಕಾಲಘಟ್ಟಗಳನ್ನು ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ದರು. ಮಹಾನ್ ಸಾಹಿತಿಯ ಬದುಕು ಬರಹವನ್ನು ವಿದ್ಯಾರ್ಥಿಗಳು ತಾವು ರಚಿಸಿದ ಚಿತ್ರಗಳಲ್ಲಿ ಕಟ್ಟಿಕೊಡಲು ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕ ಕೆ.ಎನ್. ಶಂಕರಪ್ಪನವರ ಕಾರ್ಯವೈಖರಿ ಎಲ್ಲರ ಪ್ರಶಂಸೆಗೆ  ಪಾತ್ರವಾಗಿತ್ತು.  ಉಪನ್ಯಾಸಕ ಎ. ರಘುನಾಥ್‌ಸಿಂಗ್‌ ಕಾರ್ಯಕ್ರಮ ಕುರಿತು ಮಾತನಾಡಿದರು.ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಮಹಮದ್ ಜಾಕಿರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಚಿತ್ರಕಲಾ ಶಿಕ್ಷಕ ಕೆ.ಎನ್. ಶಂಕರಪ್ಪ, ಮುಖ್ಯಶಿಕ್ಷಕಿ ಬಿ. ಕೋಮಲ, ಉಪನ್ಯಾಸಕರು ಹಾಗೂ ಸಹಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.