ಭಾನುವಾರ, ಮೇ 16, 2021
21 °C

ಚಿಣ್ಣರ ಚಿತ್ರಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಸರ್ವತೋಮುಖ ಬೆಳವಣಿಗೆಯ ಪರಿಕಲ್ಪನೆ ಇಟ್ಟುಕೊಂಡು ಸ್ಥಾಪನೆಯಾದ ಐಲೀಪ್ ಅಕಾಡೆಮಿ (ಇಂಟಿಗ್ರೇಟೆಡ್ ಲರ್ನಿಂಗ್ ಎನ್‌ರಿಚ್‌ಮೆಂಟ್ ಅಛೀವ್‌ಮೆಂಟ್ ಪ್ರೋಗ್ರಾಂ) 4ರಿಂದ 12 ವರ್ಷದ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಲು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಕ್ಕಳಿಗಾಗಿಯೇ ಐಮೆಲೋಡಿ, ಸಂಗೀತ ರಸಗ್ರಹಣ, ಚಿತ್ರಶಾಲೆಯ ಪರಿಕಲ್ಪನೆಯನ್ನೂ ಆರಂಭಿಸಿದೆ.ಶಿಕ್ಷಣ ತಜ್ಞೆ ನೂಪುರ್ ಕಾಂಚನ್ ಮುಂಬೈನಲ್ಲಿ 3 ವರ್ಷಗಳ ಹಿಂದೆ ಆರಂಭಿಸಿದ ಅಕಾಡೆಮಿ ಈಗ ಟಿಸಿಲೊಡೆದು ಬೆಳೆಯುತ್ತಿದೆ. ಬೆಂಗಳೂರು ಕೇಂದ್ರದಲ್ಲಿ 100 ಮಕ್ಕಳು ಓದುತ್ತಿದ್ದಾರೆ. ಪ್ರಸ್ತುತ ಮಕ್ಕಳಿಗಾಗಿ, ಮಕ್ಕಳೇ ರಚಿಸಿದ ಚಿತ್ರಗಳ ಪ್ರದರ್ಶನವನ್ನು ಅಕಾಡೆಮಿಯ ಆವರಣದಲ್ಲಿರುವ ಕಲಾ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಪ್ರದರ್ಶನ ಸಾರ್ವಜನಿಕರಿಗಾಗಿ ತೆರೆದಿದ್ದು ಗುರುವಾರ ಮುಕ್ತಾಯ.ಸ್ಥಳ: ನಂ 625, 11ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾನಗರ. ವಿವರಗಳಿಗೆ www.ileap.in    ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.