ಚಿಣ್ಣರ ಶಿಬಿರದಲ್ಲಿ ಸಂಸ್ಕೃತಿ ಪಾಠ

7

ಚಿಣ್ಣರ ಶಿಬಿರದಲ್ಲಿ ಸಂಸ್ಕೃತಿ ಪಾಠ

Published:
Updated:
ಚಿಣ್ಣರ ಶಿಬಿರದಲ್ಲಿ ಸಂಸ್ಕೃತಿ ಪಾಠ

ಬನಶಂಕರಿಯಲ್ಲಿನ ಸುಚಿತ್ರ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಂಗ ಸಂಸ್ಥೆಯಾದ ಸುಚಿತ್ರ ಬಾಲಜಗತ್ ಮಕ್ಕಳಿಗಾಗಿ ಆಯೋಜಿಸಿದ ಒಂದು ತಿಂಗಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ನಡೆಯಿತು.ಸುಮಾರು 65ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಯೋಗ, ಚಿತ್ರರಚನೆ, ನೃತ್ಯ, ಬೊಂಬೆಯಾಟ, ಕೋಲಾಟ, ಹಾಗೂ ನಾಟಕ ತರಬೇತಿ ಪಡೆದರು. ಈ ಮಕ್ಕಳ ಬೇಸಿಗೆ ಶಿಬಿರವು ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸಲು ಅವಕಾಶ ಕಲ್ಪಿಸಿತು.ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ತಮ್ಮ ಸಂತೋಷ, ಉತ್ಸಾಹವನ್ನು ವ್ಯಕ್ತಪಡಿಸಿದರು.

ಈ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವು ಸುಚಿತ್ರದ ಪೀರ್ ಬಯಲು ರಂಗಮಂದಿರದಲ್ಲಿ, ತಿಂಗಳ ಅವಧಿಯಲ್ಲಿ ಮಕ್ಕಳು ಕಲಿತದ್ದನ್ನು ಪ್ರದರ್ಶಿಸಲಾಯಿತು.ಶಿಬಿರದ ಮುಖ್ಯ ಆಕರ್ಷಣೆಯಾಗಿ ಡಾ. ಚಂದ್ರಶೇಖರ ಕಂಬಾರರ ನಾಟಕ  `ಕಿಟ್ಟಿ ಕಥೆ~ ಪ್ರದರ್ಶಿಸಲಾಯಿತು. ಅನುಭವಿ ಹವ್ಯಾಸಿ ಕಲಾವಿದರ ಪ್ರಯೋಗದಂತೆ ಶಿಸ್ತುಬದ್ಧವಾಗಿ ಪ್ರದರ್ಶನಗೊಂಡ ನಾಟಕ ನೋಡುಗರ ಮನಸೆಳೆಯಿತು. ಅಭಿರುಚಿ ಚಂದ್ರು ನಾಟಕವನ್ನು ನಿರ್ದೇಶಿಸಿದ್ದರು. ಸುಚಿತ್ರದ ಸಂಚಾಲಕರಾದ ಜಿ.ವೆಂಕಟಸ್ವಾಮಿ ಶಿಬಿರದ ವ್ಯವಸ್ಥೆ ಮಾಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry