ಗುರುವಾರ , ಫೆಬ್ರವರಿ 25, 2021
24 °C
ಸರ್ವಾಂಗೀಣ ಬೆಳವಣಿಗೆಗೆ ಶಾಲೆಯಲ್ಲಿ ಆದ್ಯತೆ

ಚಿತ್ತಾಪುರ ಶಾಲೆಯಲ್ಲಿ ಮಕ್ಕಳ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ ಶಾಲೆಯಲ್ಲಿ ಮಕ್ಕಳ ಕಲರವ

ಕುಕನೂರು: ಶಿಕ್ಷಣದ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಈ ಶಾಲೆ ಮುಂದಾಗಿದೆ. ಆ ಬದ್ಧತೆ, ಶಿಕ್ಷಣ ಪ್ರೀತಿ ಇಲ್ಲಿನ ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿಯೂ ಇದೆ.

ಇದು ಸಮೀಪದ ಚಿತ್ತಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ.ಬರಿಯ ಬೋಧನೆ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆ, ಕ್ರೀಡೆ, ಸಂಸ್ಕೃತಿ ಪರಿಸರ ಮತ್ತು ಚಟುವಟಿಕೆ ಆಧಾರಿತ ಬೋಧನೆಗೆ ಇಲ್ಲಿನ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡುತ್ತಾರೆ.ಶಾಲಾಭಿವೃದ್ಧಿ ಸಮಿತಿಯ ಕಾರ್ಯವೈಖರಿ ಬೇರೆಡೆಗೆ ಹೋಲಿಸಿದರೆ ಉತ್ತಮವಾಗಿದೆ ಎನ್ನುತ್ತಾರೆ ಶಿಕ್ಷಕರು. ಜತೆಗೆ ಗ್ರಾಮದ ಯುವಕರ ಸಹಭಾಗಿತ್ವವೂ ಇಲ್ಲಿದೆ.ಯೋಗದ ಪರಿಪಾಠ:  ಆರೋಗ್ಯ ಮತ್ತು ಮನಸ್ಸು ಸ್ಥಿರತೆಯಿಂದ ಇರಲು ಪ್ರತಿದಿನ ಬೆಳಿಗ್ಗೆ 6ಕ್ಕೆ ಮುಖ್ಯ ಶಿಕ್ಷಕ ವಿರೂಪಾಕ್ಷಪ್ಪ ವಾರದ ಅವರು ಮಕ್ಕಳಿಗೆ ಯೋಗ ಕಲಿಸುತ್ತಾರೆ.ಶಾಲೆಯಲ್ಲಿ ಶಿಸ್ತು, ಸಮಯಪಾಲನೆ, ಪರಸ್ಪರ ಗೌರವಿಸುವುದು, ನೈತಿಕ ಶಿಕ್ಷಣಕ್ಕೆ ಒತ್ತು .ಪ್ರತಿ ವರ್ಷ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾಮಟ್ಟದವರೆಗೆ ಭಾಗವಹಿಸಿ ಹಲವು ಪ್ರಶಸ್ತಿ, ಬಹುಮಾನ ಗಳಿಸಿದ್ದಾರೆ.ಪರಿಸರ ನಿರ್ಮಾಣ: ಶಾಲೆಯ ಆವರಣದಲ್ಲಿ ವಿವಿಧ ತರಹದ ಮರಗಳು ಬೆಳೆದಿವೆ. ಇದರಿಂದ ಪರಿಸರ ಉತ್ತಮ ವಾತವರಣದಿಂದ ಕೂಡಿದೆ. ಶಾಲೆಗೆ ಊರಿನ ಗ್ರಾಮಸ್ಥರು ಸಂಪೂರ್ಣ ಸಹಕಾರ, ಬೆಂಬಲ ಹಾಗೂ ದೇಣಿಗೆ ನೀಡಿದ್ದಾರೆ. ಇದರ ಫಲವಾಗಿಯೇ ಕಂಪ್ಯೂಟರ್‌, ಪ್ರಿಂಟರ್‌ ಇತ್ಯಾದಿ ಸಲಕರಣೆಗಳು ಶಾಲೆಯಲ್ಲಿವೆ. ಮುಖ್ಯ ಶಿಕ್ಷಕ ವಿರೂಪಾಕ್ಷಪ್ಪ ವಾರದ ಅವರಿಗೆ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿಯೂ ಲಭಿಸಿದೆ.

-ಮಂಜುನಾಥ ಎಸ್. ಅಂಗಡಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.