ಭಾನುವಾರ, ಮೇ 16, 2021
27 °C

ಚಿತ್ರಕಲಾವಿದೆ ಗೌರಿ ವೆಮುಲಾಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಚಿತ್ರಕಲೆಯಲ್ಲಿ ಮಹಿಳೆಯರ ಸಾಧನೆ ಅಪರೂಪ ಎನ್ನುವ ಸಂದರ್ಭದಲ್ಲಿ ಎಲ್ಲ ಸಂಕಷ್ಟಗಳನ್ನು ಮೀರಿ ನಿಂತು, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದೆ ಗೌರಿ ವೆಮುಲಾ ಅವರ ಸಾಧನೆ ಶ್ಲಾಘನೀಯ ಎಂದು ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳೆಕಾಯಿ ಅಭಿಪ್ರಾಯಪಟ್ಟರು.ಇಲ್ಲಿನ ಕುಸುಗಲ್ ರಸ್ತೆಯ ಚಿತ್ರಸಂಗಮ ಆರ್ಟ್ ಗ್ಯಾಲರಿಯಲ್ಲಿ ಬುಧವಾರ ಕಲಾವಿದ ಕೆ.ವಿ.ಶಂಕರ್ ನೇತೃತ್ವದಲ್ಲಿ ನಡೆದ ಗೌರಿ ವೆಮುಲಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹುಬ್ಬಳ್ಳಿಯ ವಿಜಯ ಮಹಾಂತೇಶ ಕಾಲೇಜಿನಲ್ಲಿ ಚಿತ್ರಕಲೆ ಅಧ್ಯಯನ ನಡೆಸಿ, ಹಲವು ಬಾರಿ ರಾಷ್ಟ್ರೀಯ ಚಿತ್ರಕಲಾ ಪ್ರಶಸ್ತಿಗೆ ಪಾತ್ರರಾಗಿರುವ ಗೌರಿ ವೆಮುಲಾ ಮುಂದೊಂದು ದಿನ ಜಗದ್ವಿಖ್ಯಾತ ಚಿತ್ರಕಲಾವಿದೆ ಅಮೃತಾ ಶೇರ್ಗಿಲ್ ಅವರ ಹಾದಿಯಲ್ಲಿ ಸಾಗಲಿ ಎಂದು ಆಶಿಸಿದರು. ಇದಕ್ಕೆಲ್ಲಾ ಕಲಾವಿದ ಕೆ.ವಿ.ಶಂಕರ್ ಸ್ಫೂರ್ತಿಯಾಗಿ ನಿಂತಿದ್ದಾರೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌರಿ ವೆಮುಲಾ, ಹುಬ್ಬಳ್ಳಿಯ ವಿಜಯ ಮಹಾಂತೇಶ ಕಾಲೇಜಿನಲ್ಲಿ ನಡೆಸಿದ ಕಠಿಣ ಅಧ್ಯಯನ ಮುಂದೆ ಉನ್ನತ ವ್ಯಾಸಂಗಕ್ಕೆಂದು ಹೈದರಾಬಾದ್‌ಗೆ ತೆರಳಿದಾಗ ಅಲ್ಲಿನ ಸವಾಲುಗಳನ್ನು ಎದುರಿಸಲು ನೆರವಾಯಿತು ಎಂದು ಹೇಳಿದರು.ಕಲಾವಿದರಾದ ಜಿ.ಆರ್.ಮಲ್ಲಾಪುರ, ಚಂದ್ರ ಕೆ.ಯಡ್ರಾಮಿ, ಜಿ.ಬಿ.ಘಾಟಗೆ, ಎಂ.ಶೇಖ್, ರಷೀದ್ ಎಂ.ಲಕ್ಷ್ಮೇಶ್ವರ, ರಾಘವೇಂದ್ರ ಪತ್ತಾರ, ರಮೇಶ ಚಂದಪ್ಪನವರ ಹಾಗೂ ಗೌರಿ ವೆಮುಲಾ ಅವರ ಸಹಪಾಠಿಗಳು ಸಮಾರಂಭದಲ್ಲಿ ಸಮಾರಂಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.