ಚಿತ್ರಕಲಾ ಶಿಕ್ಷಕರ ಹೋರಾಟ ಅಂತ್ಯ

7

ಚಿತ್ರಕಲಾ ಶಿಕ್ಷಕರ ಹೋರಾಟ ಅಂತ್ಯ

Published:
Updated:

ಗುಲ್ಬರ್ಗ: ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಚಿತ್ರಕಲಾ ಶಿಕ್ಷಕರ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ತಡೆಹಿಡಿದಿರುವ ಸರ್ಕಾರದ ಕ್ರಮ ವಿರೋಧಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಸತಿ ಶಾಲೆಗೆ ಆಯ್ಕೆಯಾದ ಚಿತ್ರಕಲಾ ಶಿಕ್ಷಕರ ಹೋರಾಟ ಸಮಿತಿ ಮುಖಂಡ ಭೋಜರಾಜ ಬಡಗೇರ ತಿಳಿಸಿದ್ದಾರೆ.ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕಾರ್ಯನಿರ್ವಾಹಕ ಎನ್. ಶಾಂತಪ್ಪರ ಲಿಖಿತ ಮನವಿ ಹಾಗೂ ಶಾಸಕ ಅಮರನಾಥ ಪಾಟೀಲರ ಮನವಿ ಮೇರೆಗೆ ಹೋರಾಟವನ್ನು ಅಂತ್ಯಗೊಳಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry