ಮಂಗಳವಾರ, ನವೆಂಬರ್ 19, 2019
23 °C

`ಚಿತ್ರಕಲೆಗೆ ತಾಂತ್ರಿಕ ಸ್ಪರ್ಶ'

Published:
Updated:

ಗುಲ್ಬರ್ಗ: ಭಾರತದ ಚಿತ್ರ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಚಿತ್ರ ಕಲಾವಿದರ ಪಾತ್ರ ಬಹಳ ಮುಖ್ಯವಾಗಿದೆ ಹಾಗೂ ಈಗಿನ ಕಲಾವಿದರು ಚಿತ್ರಕಲೆಯಲ್ಲಿ ತಾಂತ್ರಿಕತೆಯನ್ನು ಹೆಚ್ಚಾಗಿ ಬಳಸುತ್ತಿದಾರೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗದ  ಸಂಯೋಜನಾಧಿಕಾರಿ  ಡಾ. ಪಿ.ಕೆ. ಖಂಡೋಬಾ ಹೇಳಿದರು.ಗುಲ್ಬರ್ಗದ ಇಂಡಿಯನ್ ರಾಯಲ್ ಅಕಾಡೆಮಿ ಹಾಗೂ ವಿಟಿಎನ್ ಕ್ರಿಯೇಟಿವ್ ಆರ್ಟ್ಸ್ ಸ್ಟುಡಿಯೋ ವತಿಯಿಂದ ವಿಶ್ವ ಕಲಾ ದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯುವಕರು ಸಾಧನೆ ಮಾಡಬೇಕಾದರೆ ನಿರಂತರವಾಗಿ ಶ್ರಮಿಸಬೇಕು. ಕಲಾವಿದರು ಕಲೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಾಗ ಮಾತ್ರ ಒಬ್ಬ ಒಳ್ಳೆಯ ಕಲಾವಿದರಾಗಿ ಹೊರಹುಮ್ಮಲು ಸಾಧ್ಯ ಎಂದು ಹೇಳಿದರು.ಗ್ರಂಥವನ್ನು ಓದಿ ಅರ್ಥಮಾಡಿಕೊಂಡ ಹಾಗೆ ಒಂದು ಕಲಾಕೃತಿಯನ್ನು ಗ್ರಹಿಸಬೇಕು. ಮತ್ತು ಕಲಾವಿದರು ಸೃಜನಶೀಲತೆಯನ್ನು ಬೆಳಿಸಿಕೊಳ್ಳಬೇಕು. ವಿಶ್ವವಿದ್ಯಾಲಯವು ಚಿತ್ರಕಲಾ ಪದವಿ ಕಾಲೇಜು ಅನುಮತಿ ನೀಡಬೇಕಾಗಿದೆ ಎಂದು ಹೇಳಿದರು.ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಯಶವಂತ ಹಿಬಾರೆ ಮಾತನಾಡಿ, ಯುವಕರು ಚಿತ್ರಕಲೆಯಲ್ಲಿ ಹೆಚ್ಚಾಗಿ ತೊಡಿಗಿಸಿಕೊಳ್ಳಬೇಕು. ಭಾರತದ ಕಲೆ ಮತ್ತು ಸಾಂಸ್ಕೃತಿಕ ವಿಶ್ವದೆಲ್ಲಡೆ ಪ್ರಚಾರಮಾಡಲು ಚಿತ್ರಕಲೆ ಒಂದು ಸಾಧನವಾಗಿದೆ. ಕಲೆಗೆ ಎಲ್ಲರೂ ಬೆಲೆ ಕೊಡಬೇಕು, ಚಿತ್ರ ಕಲಾವಿದ ವಿಶ್ವೇಶ್ವರಯ್ಯ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.ಖ್ಯಾತ ಕಲಾವಿದ ಬಸವರಾಜ ಜಾನೆ, ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ ಮತ್ತು ಕಲ್ಚರ್ ಸಂಸ್ಥೆ ಅಧ್ಯಕ್ಷ ಡಾ. ರೆಹಮಾನ ಪಟೇಲ್, ವಿಟಿಎನ್ ಕ್ರೀಯೋಟಿವ್ ಆರ್ಟ್ಸ್ ಸ್ಟುಡಿಯೋ ಮುಖ್ಯಸ್ಥ ವಿಶ್ವೇಶ್ವರಯ್ಯ ಟಿ.ಎನ್, ಮಲ್ಲಿಕಾರ್ಜುನ ದಿಗ್ಗಾಂವ, ನಾರಾಯಣ ಜೋಷಿ ಮತ್ತಿತತರರು ಇದ್ದರು.ಡಾ. ನಳಿನಿ ಮಾಘಮಾರೆ, ಜೀತೇಂದ್ರ ಕೊತಾಲಿಕರ್, ಡಾ. ವಿಶ್ವೇಶ್ವರಿ ತಿವಾರಿ, ಡಾ. ಪರಶುರಾಮ ಉಪನ್ಯಾಸ ನೀಡಿದರು.ಚಿತ್ರಕಲಾ ಪ್ರದರ್ಶನದಲ್ಲಿ  ವಿಜೇತರಾದ ಚೇತನ ಕೆರೂರ, ವಿರೇಶ ರಟಕಲ್, ದಾಕ್ಷಾಯಿಣಿ ಇನಾಂದಾರ, ಸೂಕ್ಷ್ಮತಾ ಬಿರಾದಾರ, ತೇಜಸ್ವಿನಿ ರೆಡ್ಡಿ, ಮಹೇಶ ಅಂಗಡಿ, ನಿಜಿಂಗ ವಿದ್ಯಾರ್ಥಿಗಳಿಗೆ ಪ್ರಮಾಣ ಪ್ರತ್ರ ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)