ಚಿತ್ರದುರ್ಗದಲ್ಲೇ 6 ಕೊಲೆ

7

ಚಿತ್ರದುರ್ಗದಲ್ಲೇ 6 ಕೊಲೆ

Published:
Updated:

ಚಿತ್ರದುರ್ಗ: ಸೈಕೊ ಕಿಲ್ಲರ್ ಜೈಶಂಕರ್, ಒಂದು ಕಾಲದಲ್ಲಿ ಇಡೀ ಚಿತ್ರದುರ್ಗ ಜಿಲ್ಲೆಯನ್ನೇ ಭಯದ ತುದಿಗಾಲಲ್ಲಿ ನಿಲ್ಲಿಸಿದ ಪಾತಕಿ. ಚಿತ್ರದುರ್ಗಕ್ಕೆ ಕಾಲಿಟ್ಟ ಒಂದೇ ತಿಂಗಳಲ್ಲಿ ಐವರನ್ನು ಕೊಂದು ಹಾಕಿದ್ದ.2011 ಏಪ್ರಿಲ್‌ನಲ್ಲಿ ಹಿರಿಯೂರಿನಲ್ಲಿ ಪತ್ನಿ ಎದುರಲ್ಲೇ ಪತಿಯ ಕೊಲೆ ಮಾಡಿದ್ದ. ಐಮಂಗಲ ಸಮೀಪದ ಗುಯಿಲಾಳು ಗ್ರಾಮದಲ್ಲಿ ಒಂಟಿ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಂದಿದ್ದ. ಸೀಬಾರ ಗ್ರಾಮದ ಸಮೀಪ ಕೂಲಿ ಕಾರ್ಮಿಕ ದಂಪತಿಯನ್ನೂ ಹತ್ಯೆ ಮಾಡಿದ್ದ. ಏಪ್ರಿಲ್ 10, 2011ರಂದು ಮೊಳಕಾಲ್ಮುರು ತಾಲ್ಲೂಕು ತಮ್ಮೇನಹಳ್ಳಿ ಕೋಳಿಫಾರಂವೊಂದರಲ್ಲಿ ನಾಗಮ್ಮ (54) ಎಂಬುವವರನ್ನು ಕೊಲೆ ಮಾಡಿದ್ದ.ಆತ ತೋಟದ ಮನೆಗಳ ಮೇಲೇ ದಾಳಿ ಮಾಡುತ್ತಿದ್ದ. ಅಲ್ಪ ಸ್ವಲ್ಪ ಹಿಂದಿ ಮಾತನಾಡುತ್ತ ದುಷ್ಕೃತ್ಯ ಎಸಗುತ್ತಿದ್ದ. ಬಟ್ಟೆಗಳನ್ನು ದೋಚುತ್ತಿದ್ದ. ಮುಂದಿನ ಊರಿಗೆ ಪ್ರಯಾಣಿಸುವುದಕ್ಕಾಗಿ ಬೈಕ್‌ಗಳನ್ನು ಕದಿಯುತ್ತಿದ್ದ.ತಮಿಳು ಭಾಷಿಕರ ಲಾರಿಗಳಲ್ಲೇ ಪ್ರಯಾಣ ಮಾಡುತ್ತಿದ್ದ. ಚಾಲಕರ ಕ್ಯಾಬಿನ್ ಮೇಲೆ ಮಲಗುತ್ತಿದ್ದನಾದ್ದರಿಂದ ಪೊಲೀಸರಿಗೆ ಈತನನ್ನು ಪತ್ತೆ ಹಚ್ಚಲು ಸಮಸ್ಯೆಯಾಗಿತ್ತು. ಅತ್ಯಾಚಾರ ಎಸಗುವ ಮುನ್ನ ಮಹಿಳೆಯರನ್ನು ವಿಧವಿಧವಾಗಿ ಹಿಂಸಿಸುತ್ತಿದ್ದ. ರಾಷ್ಟ್ರೀಯ ಹೆದ್ದಾರಿಗಳ ಡಾಬಾ, ಟೋಲ್‌ಗೇಟ್‌ಗಳಲ್ಲಿ ಕೊಲೆ, ಅತ್ಯಾಚಾರ ಮಾಡುತ್ತಿದ್ದ. ಒಟ್ಟೂ 15 ಅತ್ಯಾಚಾರದಲ್ಲಿ ಈತ ಭಾಗಿ ಎನ್ನುತ್ತವೆ ಪೊಲೀಸ್ ದಾಖಲೆಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry