ಚಿತ್ರದುರ್ಗ: ದಂಪತಿ ಆತ್ಮಹತ್ಯೆ

7

ಚಿತ್ರದುರ್ಗ: ದಂಪತಿ ಆತ್ಮಹತ್ಯೆ

Published:
Updated:

ಚಿತ್ರದುರ್ಗ: ಸಾಲದ ಬಾಧೆ ತಾಳಲಾರದೆ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ ಗ್ರಾಮದಲ್ಲಿ ನಡೆದಿದೆ. ಕುದುರಪ್ಪ (65) ಮತ್ತು ಅವರ ಪತ್ನಿ ಸಾವಿತ್ರಮ್ಮ (60) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.ಈ ದಂಪತಿ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲು ಮತ್ತು ಅಭಿವೃದ್ಧಿಪಡಿಸಲು ಬ್ಯಾಂಕ್‌ನಿಂದ ರೂ 2 ಲಕ್ಷ  ಮತ್ತು ಸ್ವಸಹಾಯ ಸಂಘದಲ್ಲಿ ರೂ 25 ಸಾವಿರ ಮತ್ತು ಗ್ರಾಮದ ಜನರಿಂದ ರೂ 1.50 ಲಕ್ಷ  ಕೈಸಾಲ ಪಡೆದಿದ್ದರು.

 

ಇತ್ತೀಚೆಗೆ ಸಕಾಲದಲ್ಲಿ ಮಳೆ ಬಾರದೆ ಬೆಳೆ ಕೈಕೊಟ್ಟಿತು. ಇದರಿಂದ ಸಾಲದ ಬಾಧೆ ತಾಳಲಾರದೆ ಕುದುರಪ್ಪ ಮತ್ತು ಸಾವಿತ್ರಮ್ಮ ಭಾನುವಾರ ತಮ್ಮ ಜಮೀನಿನ ಗುಡಿಸಲಲ್ಲಿ ಹತ್ತಿ ಬೆಳೆಗೆ ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ದ್ದಿದರು. ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry