ಶನಿವಾರ, ಅಕ್ಟೋಬರ್ 19, 2019
28 °C

ಚಿತ್ರಾಂಗದೆಯ ಫಟಾಫಟ್ ಶಾಪಿಂಗ್

Published:
Updated:
ಚಿತ್ರಾಂಗದೆಯ ಫಟಾಫಟ್ ಶಾಪಿಂಗ್

ಬಾಲಿವುಡ್ ಬೆಡಗಿ ಮಹಾನಗರಿಗೆ ಬಂದು ಸಂಜೆಹೊತ್ತಲ್ಲಿ ಶಾಪಿಂಗ್ ಮಾಡಿದ್ರೆ? ಶಾಪಿಂಗ್ ಅಂದ್ರೆ ಸುಮ್ನೇನಾ, ಗಂಟೆಗಟ್ಟಲೆ ಸಮಯ ಬೇಡುತ್ತೆ. ಆದ್ರೆ ಈ ಬೆಡಗಿ ಹಾಗಲ್ಲ. ಎ್ಲ್ಲಲಾ ಫಟಾಫಟ್. ಐದೇ ನಿಮಿಷದಲ್ಲಿ ಶಾಪಿಂಗ್ ಮುಗ್ದೇ ಹೋಯ್ತು. ತನ್ನೊಡನೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದವರೊಂದಿಗೆ ಪೋಸು ಕೊಟ್ಟದ್ದು ಮಾತ್ರ ಅಷ್ಟೇ ತಾಳ್ಮೆಯಿಂದ. ಯಾರೀ ಬೆಡಗಿ ಎಂದು ಆಶ್ಚರ್ಯವಾ?`ದೇಸಿ ಬಾಯ್ಸ~ ಚಿತ್ರದ ಗರ್ಲ್ ಚಿತ್ರಾಂಗದ ಸಿಂಗ್. ಈಕೆ ಶಾಪಿಂಗ್‌ಗೆಂದು ಪಾದ ಬೆಳೆಸ್ದ್ದಿದು ಗರುಡಾ ಮಾಲ್‌ನ `ಪೂಮ~ ಶಾಪ್ ಸ್ಟೋರ್‌ಗೆ. ಸ್ಪೋರ್ಟ್ಸ್ ಲೈಫ್ ಸ್ಟೈಲ್ ಬ್ರಾಂಡ್‌ಗೆ ಹೆಸರುವಾಸಿಯಾಗಿರುವ ಪೂಮ, ಹೊಸವರ್ಷ ಹಾಗೂ ಸಂಕ್ರಾಂತಿಯನ್ನು ಬರಮಾಡಿಕೊಂಡಿದ್ದು ಈ ಬಾಲಿವುಡ್ ಬೆಡಗಿಯೊಂದಿಗೆ.ದೇಹಕ್ಕೊಪ್ಪುವ ಉಡುಗೆ ಯಾವುದಾದರೂ ಸೈ ಎನ್ನುವ ಈ ಬೆಡಗಿ `ಪೂಮ ಬ್ರಾಂಡ್ ಫಿಟಿಂಗ್‌ನಲ್ಲಿ ಪರ್‌ಫೆಕ್ಟ್~ ಎಂದು ಕಾಂಪ್ಲಿಮೆಂಟ್ ಕೂಡ ಕೊಟ್ರು. ಇಲ್ಲಿ ತುಂಬಾ ಕಲೆಕ್ಷನ್ಸ್ ಇದ್ದು, ಹೊಸಮಾದರಿ ದಿರಿಸುಗಳಿವೆ ಎನ್ನುವ ಸಿಂಗ್‌ಗೆ ಟೀ ಶರ್ಟ್, ಜೀನ್ಸ್ ಅಂದ್ರೆ ಬಲು ಇಷ್ಟವಂತೆ.ಕಾಮರ್ಷಿಯಲ್, ಕಲಾತ್ಮಕ ಹೀಗೆ ಜನ ಮೆಚ್ಚುಗೆ ಗಳಿಸುವ ಯಾವ ಸಿನಿಮಾವಾದರೂ ಸರಿ ನಟನೆಗೆ ಸಿದ್ಧವಿರುವ ಸಿಂಗ್, ಸದ್ಯಕ್ಕೆ ಹಾಲಿವುಡ್‌ಗೆ ಹೋಗೋ ಪ್ಲಾನ್ ಇಲ್ವಂತೆ. ಬಾಲಿವುಡ್‌ನಲ್ಲೇ ಗಟ್ಟಿಯಾಗಿ ತಳವೂರಬೇಕೆಂದಿದ್ದೇನೆ ಎನ್ನುತ್ತಾ ಮುಗುಳ್ನಗೆ ಬೀರಿದರು.ಬಾಲಿವುಡ್ ತಾರೆ ಕರೀನಾ ಕಪೂರ್ ನೆಚ್ಚಿನ ಹೀರೋಯಿನ್ ಎನ್ನುವ ಸಿಂಗ್‌ಗೆ ಆಕೆಯ ನಟನೆ, ನೃತ್ಯ ಎಲ್ಲವೂ ಇಷ್ಟ. ಆ ಮಟ್ಟಕ್ಕೆ ತಾವೂ ಬೆಳೆಯಬೇಕೆಂಬ ಬಯಕೆ ಅವರದ್ದು. ಬೆಂಗಳೂರಿಗರಿಗೆ ಸಂಕ್ರಾಂತಿಯ ಶುಭಾಶಯ ಹೇಳಲು ಅವರು ಮರೆಯಲಿಲ್ಲ.`ಪೂಮ ಬ್ರಾಂಡ್~ ಸ್ಪೋರ್ಟ್ಸ್, ಫ್ಯಾಶನ್ ಹೀಗೆ ಜನರ ಜೀವನಶೈಲಿಗೆ ಹೊಂದುವಂಥ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಗ್ರಾಹಕರಿಗೆ ಹತ್ತಿರವಾಗಿದೆ. ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಬೆಸೆಯಲು ಮುಂದಾಗಿರುವ ಅದು ಉತ್ತಮ ಗುಣಮಟ್ಟದೊಂದಿಗೆ ಗುರುತಿಸಿಕೊಂಡಿದೆ. ಹೊಸವರ್ಷದಲ್ಲಿ ಮತ್ತಷ್ಟು ವಿಭಿನ್ನ  ಮಾದರಿಯ ಉಡುಪುಗಳನ್ನು ಹೊತ್ತುತರುತ್ತಿದ್ದು, ಅವುಗಳ ಪರಿಚಯವನ್ನು ಬಾಲಿವುಡ್ ಬೆಡಗಿಗೆ ಮಾಡಿಕೊಟ್ಟಿತು.  ಶೇ 50ರಷ್ಟು ರಿಯಾಯಿತಿ ಹೊಂದಿದ್ದು, ಎಲ್ಲಾ ಋತುವಿಗೂ ತಕ್ಕಂತೆ ವಿವಿಧ ಉಡುಪು ಸಿದ್ಧಪಡಿಸುವುದು ಪೂಮದ ವಿಶೇಷತೆ. ಚಳಿಗಾಲಕ್ಕೆ ಹೊಂದಿಕೆಯಾಗುವಂತೆ ಹೊಸ ಫ್ಯಾಶನ್‌ನ ಜಾಕೆಟ್, ಸ್ವೆಟರ್ಸ್‌, ಸ್ನೀಕರ್ಸ್‌, ಫ್ಲಿಪ್‌ಫ್ಲಾಪ್ಸ್, ಟಿ-ಶರ್ಟ್ಸ್, ಪ್ಯಾಂಟ್ಸ್, ಜರ್ಸಿ, ಟ್ರ್ಯಾಕ್ ಪ್ಯಾಂಟ್, ಸ್ವಿಮ್ಮಿಂಗ್ ಡ್ರೆಸ್ ಮೊದಲಾದ ಉಡುಗೆಗಳು ಇಲ್ಲಿ ಲಭ್ಯ.

ಹೆಚ್ಚಿನ ವಿವರಕ್ಕೆ www.pumashop.in ವೆಬ್‌ಸೈಟ್‌ಗೆ ಭೇಟಿನೀಡಿ. 

Post Comments (+)