ಚಿತ್ರೀಕರಣ ವೇಳೆ ಸುದೀಪ್‌ಗೆ ಗಾಯ

7

ಚಿತ್ರೀಕರಣ ವೇಳೆ ಸುದೀಪ್‌ಗೆ ಗಾಯ

Published:
Updated:

ಮದ್ದೂರು: ಸಮೀಪದ ತೈಲೂರಿನಲ್ಲಿ ಗುರುವಾರ ಕೆಂಪೇಗೌಡ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ನಾಯಕ ನಟ ಸುದೀಪ್ ಗಾಯಗೊಂಡಿದ್ದಾರೆ.

 ಆಂಜನೇಯ ದೇಗುಲದ ಬಳಿ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ನಿರ್ದೇಶನದಲ್ಲಿ ಸಾಹಸ  ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಆಗ ಮಡಿಕೆ ಸ್ಫೋಟಿಸುವ ದೃಶ್ಯದಲ್ಲಿ ಸುದೀಪ್ ಪಾಲ್ಗೊಂಡಿದ್ದರು.

ಮಡಿಕೆ ಸ್ಫೋಟಗೊಂಡಾಗ ಅದರ ಚೂರು ರಭಸವಾಗಿ ಸುದೀಪ್ ಬಲಗಾಲಿಗೆ ಬಡಿದು  ಗಾಯಗೊಂಡಿದ್ದಾರೆ. ಅಲ್ಲದೆ ಬೆಂಕಿಯು ಸುದೀಪ್ ಬೆನ್ನಿಗೆ ತಾಗಿದ್ದರಿಂದ ಅಲ್ಪ ಪ್ರಮಾಣದಲ್ಲಿ ಸುಟ್ಟ  ಗಾಯವಾಗಿದೆ. ಕೂಡಲೇ ಸುದೀಪ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry