ಶನಿವಾರ, ಫೆಬ್ರವರಿ 27, 2021
20 °C

ಚಿತ್ರೋತ್ಸವದ ಮೆಲುಕುಗಳು

ಜೆ. ಪಿ. Updated:

ಅಕ್ಷರ ಗಾತ್ರ : | |

ಚಿತ್ರೋತ್ಸವದ ಮೆಲುಕುಗಳು

ನಗರದಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಸಿನಿಮೋತ್ಸವ ಕುರಿತ ಸಣ್ಣ ಸಣ್ಣ ಮಾಹಿತಿ ಆಸಕ್ತಿಕರ. 

*ಚಲನಚಿತ್ರ ಆವಿಷ್ಕಾರವಾಗಿ ಮೂಕಿ ಚಲನಚಿತ್ರಗಳು ಸಿದ್ಧಗೊಂಡು, ಕ್ರಮೇಣ ಸಿನಿಮಾಗಳಿಗೆ ಮಾತು ಸೇರಿಸುವ ಪರಿಪಾಠ ಶುರುವಾದ ನಂತರ 1930ರ ದಶಕದಲ್ಲಿ ಒಂದೇ ಚಿತ್ರಮಂದಿರದಲ್ಲಿ ನಾಲ್ಕೈದು ಚಿತ್ರಗಳನ್ನು ಪ್ರದರ್ಶಿಸುವ ‘ಉತ್ಸವ’ ಪರಿಕಲ್ಪನೆ ಮೂಡಿಬಂತು.

*ಪ್ರಸ್ತುತ ಚಲನ ಚಿತ್ರೋತ್ಸವಗಳನ್ನು ನಡಸದೇ ಇರುವ ದೇಶಗಳೇ ವಿರಳ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ (2013) ವಿಶ್ವದಲ್ಲೀಗ ಸಕ್ರಿಯವಾಗಿರುವ ಚಲನ ಚಿತ್ರೋತ್ಸವಗಳ ಸಂಖ್ಯೆ ಮೂರು ಸಾವಿರ.

*ವೆನಿಸ್‌ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಈಗಿರುವ ಸಕ್ರಿಯ ಚಿತ್ರೋತ್ಸವಗಳಲ್ಲಿ ಅತ್ಯಂತ ಹಳೆಯದು. ಇದು ಪ್ರಾರಂಭಗೊಂಡಿದ್ದು 1932ರಲ್ಲಿ.

*ಭಾರತದಲ್ಲಿ ಮೊಟ್ಟ ಮೊದಲು ಸಿನಿಮಾ ಪ್ರದರ್ಶನಗೊಂಡ ನಗರ ‘ಮುಂಬೈ’ ಭಾರತದ ಪ್ರಥಮ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಾರಂಭಗೊಂಡಿದ್ದು ಮುಂಬೈ ಮಹಾನಗರದಲ್ಲಿ (1952).

* ಅಮೆರಿಕದ ‘ಸಿಟ್ಟೆ’ ಪಟ್ಟಣದಲ್ಲಿ ನಡೆಯುವ ಚಿತ್ರೋತ್ಸವ ಅತಿ ದೀರ್ಘವಾದುದು. ಇಲ್ಲಿಯ ಚಿತ್ರಮಂದಿರಗಳಲ್ಲಿ 400 ಚಿತ್ರಗಳು ಒಂದು ತಿಂಗಳ ಕಾಲ ಪ್ರದರ್ಶಿತವಾಗುತ್ತವೆ.

*ಅಂತರರಾಷ್ಟ್ರೀಯ ಚಿತ್ರ ನಿರ್ಮಾಣ ಒಕ್ಕೂಟ (ಎಫ್‌.ಐ.ಎ.ಪಿ.ಎಫ್‌.)ದಿಂದ ಮಾನ್ಯತೆ ಪಡೆದಿರುವ ಭಾರತದ ಏಕೈಕ ಸ್ಪರ್ಧಾತ್ಮಕ ಚಲನಚಿತ್ರೋತ್ಸವ ಗೋವಾದಲ್ಲಿ ಭಾರತ ಸರ್ಕಾರ ಏರ್ಪಡಿಸುವ ‘ಇಫಿ’ (ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವ) ಚಲನ ಚಿತ್ರೋತ್ಸವ.

*ಬೆಂಗಳೂರಿನಲ್ಲಿ ಪ್ರಥಮ ಅಂತರರಾಷ್ಟ್ರೀಯ ಚಿತ್ರೋತ್ಸವ ‘ಫಿಲಿಮೋತ್ಸವ’ ನಡೆದದ್ದು 1980ರಲ್ಲಿ. ಇದನ್ನು ಉದ್ಘಾಟಿಸಿದವರು ಖ್ಯಾತ ಅಭಿನೇತ್ರಿ ದೇವಿಕಾ ರಾಣಿ ರೋರಿಚ್‌.

*ಜಗತ್ತಿನಲ್ಲಿ ‘ಬಿಗ್‌ತ್ರಿ’ ಎಂದು ಪರಿಗಣಿಸಲಾಗಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳೆಂದರೆ ಕಾನ್‌, ಬರ್ಲಿನ್‌ ಹಾಗೂ ವೆನಿಸ್‌ ಚಿತ್ರೋತ್ಸವಗಳು.

*ಆಸ್ಟ್ರೇಲಿಯಾದಲ್ಲಿ ಆರಂಭವಾದ ಮೊದಲ ಹಾಗೂ ನಿರಂತರವಾಗಿ ನಡೆಯುತ್ತಿರುವ ಉತ್ಸವ ಮೇಲ್ಬರ್ನ್‌ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ (1952).

*ಭಾರತದಲ್ಲಿ ಪ್ರಾರಂಭಕ್ಕೆ ‘ಇಫಿ’ (ಅಂತರರಾಷ್ಟ್ರೀಯ ಚಿತ್ರೋತ್ಸವ) ಹಾಗೂ ಫಿಲ್ಮೋತ್ಸವಗಳು ಪ್ರತ್ಯೇಕವಾಗಿ ನಡೆಯುತ್ತಿದ್ದವು. 1975ರಿಂದೀಚೆಗೆ ಇವರೆಡೂ ಒಂದಾಗಿ ‘ಭಾರತ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ’ ಎಂಬ ಹೆಸರಿನಲ್ಲಿ ಪ್ರತಿವರ್ಷ  ಏರ್ಪಾಡಾಗುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.