ಚಿತ್ರ ನಿರ್ಮಾಣ ಸ್ಪರ್ಧೆಗೆ ಆಹ್ವಾನ

7

ಚಿತ್ರ ನಿರ್ಮಾಣ ಸ್ಪರ್ಧೆಗೆ ಆಹ್ವಾನ

Published:
Updated:

ಐಎಫ್‌ಪಿ(ಇಂಡಿಯಾ ಫಿಲ್ಮ್‌ ಪ್ರಾಜೆಕ್ಟ್‌)ಭಾರತದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಯೋಜನೆಯಾದ ‘ಭಾರತೀಯ ಚಲನಚಿತ್ರ ಯೋಜನೆ’ಯ 2013ರ ಆವೃತ್ತಿಯನ್ನು ಸೆ.20ರಿಂದ 28ರವರೆಗೆ ನಡೆಸಲಿದೆ. ಕೇವಲ 48 ಗಂಟೆಗಳಲ್ಲಿ ಚಲನಚಿತ್ರವನ್ನು ನಿರ್ಮಿಸುವ ಸವಾಲು ಎದುರಿಸಲು ಆಸಕ್ತಿ ಇರುವವರು ಸೆ.14ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು.ಸೆ.20ರಂದು  ರಾತ್ರಿ 8ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಚಿತ್ರೀಕರಣದ ಅವಧಿ ಮತ್ತು ವಿಷಯವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ. ವಿವಿಧ ದೇಶಗಳ ಸ್ಪರ್ಧಿಗಳು ಎರಡು ದಿನಗಳಲ್ಲಿ ಒಂದೇ ವಿಷಯದ ಮೇಲೆ ಚಿತ್ರಗಳನ್ನು ತಯಾರಿಸಬೇಕಾಗುತ್ತದೆ.ಭಾಗವಹಿಸುವ ತಂಡಗಳು ಸ್ಕ್ರಿಪ್ಟ್ ತಯಾರಿಕೆ, ಶೂಟಿಂಗ್‌, ಎಡಿಟಿಂಗ್ ಮಾಡಿ ಸೆ.22ರ ರಾತ್ರಿ 8ಗಂಟೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ: 9880769585

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry