ಮಂಗಳವಾರ, ಮೇ 11, 2021
21 °C

ಚಿತ್ರ ಸಂತೆ: ಅರಳಿದ ದೃಶ್ಯಕಾವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಸೋತ ಕಲಾ ರಸಿಕರು

ಮೈಸೂರು:
ನಗರದ ಜನತೆ ರಾಷ್ಟ್ರ ಮಟ್ಟದ ಎರಡನೇ ಚಿತ್ರ ಸಂತೆಗೆ ಭಾನುವಾರ ಸಾಕ್ಷಿಯಾದರು. ನಂಜರಾಜ ಬಹದ್ದೂರ್ ಛತ್ರದ ಮುಂಭಾಗದಲ್ಲಿ  ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆಯು ಆಯೋಜಿಸಿದ್ದ ಚಿತ್ರ ಸಂತೆಗೆ ಬೆಳಿಗ್ಗೆ 10. 30 ರಿಂದ ರಾತ್ರಿ 9 ಗಂಟೆ ತನಕ ಸಾವಿರಾರು ಕಲಾ ಪ್ರೇಮಿಗಳು ಗುಂಪು  ಗುಂಪಾಗಿ ಆಗಮಿಸಿ ಬಗೆ ಬಗೆಯ ಕಲಾಕೃತಿಗಳನ್ನು ವೀಕ್ಷಿಸಿ ಖುಷಿಪಟ್ಟರು. ಚಿತ್ರ ಸಂತೆಯಲ್ಲಿ ಮಕ್ಕಳು, ಯುವಕ, ಯುವತಿಯರು ಹೆಚ್ಚಾಗಿ ಕಂಡುಬಂದರು.  ಕೆಲವರು ಕುಟುಂಬ ಸಮೇತರಾಗಿ ಆಗಮಿಸಿ ಕಲಾಕೃತಿಗಳ ಮೋಡಿಗೆ ಬೆರಗಾದರು. ಇನ್ನು ಕೆಲವು ತಮ್ಮ ಚಿತ್ತವನ್ನು ಅಪಹರಿಸಿದ  ಕಲಾಕೃತಿಗಳನ್ನು ಖರೀದಿಸಿದರು.ಚಿತ್ರ ಸಂತೆಯಲ್ಲಿ ಶ್ರೀಕೃಷ್ಣನ ಕೊಳಲಿನ ನಾದವನ್ನು ಆಲಿಸುತ್ತಿರುವ ಗೋವು, ಮೇನಕೆಗೆ ಮನಸೋತ ವಿಶ್ವಾಮಿತ್ರ, ಆಪ್ತರಕ್ಷಕನ ಗೆಟಪ್‌ನಲ್ಲಿ ವಿಷ್ಣುವರ್ಧನ್, ಮೈಸೂರು ಪೇಟ ತೊಟ್ಟ ರಾಜ್‌ಕುಮಾರ್, ಹಾಡಿನ ತನ್ಮಯತೆಯಲ್ಲಿ ಸಿ.ಅಶ್ವತ್ಥ್ ಗಮನ ಸೆಳೆದವು.ಇಲ್ಲಿ ನೈಜ, ಸೃಜನ, ರೇಖಾಚಿತ್ರ, ಪ್ರಕೃತಿಚಿತ್ರ, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ವಿನ್ಯಾಸಗಳು, ಮಣ್ಣಿನಕಲೆ, ಶಿಲ್ಪಕಲೆ, ಶಿಲ್ಪಕಲೆ, ಅಮೂರ್ತಕಲೆ, ಗಾಜಿನ ಚಿತ್ರಕಲೆ, ಮರದ ಚಿತ್ರಕಲೆ, ಪೇಪರ್ ಕಟ್ಟಿಂಗ್ಸ್, ಪೆನ್ಸಿಲ್ ಚಿತ್ರಕಲೆ, ರಂಗೋಲಿ ಚಿತ್ರಕಲೆ, ಸಾಂಜಿ, ಜಾನಪದ ಹಾಗೂ ಎಲೆಯ ಮೇಲಿನ ಚಿತ್ರಕಲಾ  ಕೃತಿಗಳು ಇದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.