ಬುಧವಾರ, ಏಪ್ರಿಲ್ 21, 2021
32 °C

ಚಿನ್ನ:ತೆರಿಗೆ ಇಳಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಚಿನ್ನದ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು (ವ್ಯಾಟ್)  ಶೇ 1ರಿಂದ ಶೇ 2ಕ್ಕೆ ಹೆಚ್ಚಿಸಿರುವುದನ್ನು ವಿರೋಧಿಸಿರುವ ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್, (ಜೆಎಬಿ) ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳ್ಳುವ ತನಕ ರಾಜ್ಯ ಸರ್ಕಾರ ಈ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಹಾಗೂ ಇದನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.ಏಪ್ರಿಲ್ 1ರಿಂದ ಚಿನ್ನಾಭರಣಗಳ ಮೇಲೆ ಪರಿಷ್ಕೃತ ‘ವ್ಯಾಟ್’ ಜಾರಿಗೊಳ್ಳಲಿದೆ. ಇದರಿಂದ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇದು ನೆರೆಯ ರಾಜ್ಯಗಳಿಗೆ, ಗಡಿ ಭಾಗದ ನಗರಗಳಿಗೆ ವ್ಯಾಪಾರದ ವರ್ಗಾವಣೆಗೆ ಕಾರಣವಾಗಲಿದೆ ಎಂದು ‘ಜಿಎಬಿ’ ಅಧ್ಯಕ್ಷ ಪಾಥಿ ಮಹೇಶ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು. ‘ವ್ಯಾಟ್’ ದರವನ್ನು ಶೇ 13.5ರಿಂದ ಶೇ 12.5ಕ್ಕೆ ಇಳಿಸಬೇಕು ಎನ್ನುವ ವಾಣಿಜ್ಯೋದ್ಯಮ ಸಂಘಗಳ ಮನವಿಗೆ ಸ್ಪಂದಿಸದ ಸರ್ಕಾರ, ವ್ಯತಿರಿಕ್ತವಾಗಿ ವರ್ತಿಸಿ ತೆರಿಗೆ ದರ ಹೆಚ್ಚಿಸಿದೆ. ಇದರಿಂದ ಹೆಚ್ಚು ವರಮಾನ ಸಂಗ್ರಹಿಸಬಹುದು ಎನ್ನುವ ಸರ್ಕಾರದ ಲೆಕ್ಕಾಚಾರ ತಪ್ಪು ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ ಬಿಟಿ. ಮನೋಹರ್ ಅಭಿಪ್ರಾಯಪಟ್ಟರು.

ನೆರೆಯ ಎಲ್ಲ ರಾಜ್ಯಗಳಲ್ಲಿ ಚಿನ್ನಾಭರಣಗಳ ಮೇಲೆ ಶೇ 1ರಷ್ಟು ‘ವ್ಯಾಟ್’ ಇರುವಾಗ, ಕರ್ನಾಟಕದಲ್ಲಿ ಮಾತ್ರ ತೆರಿಗೆ ದರ ಹೆಚ್ಚಿಸಿರುವುದು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಅಖಿಲ ಭಾರತ ಚಿನ್ನಾಭರಣ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ವಿನೋದ್ ಹಯಗ್ರೀವ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.