ಶುಕ್ರವಾರ, ಏಪ್ರಿಲ್ 16, 2021
31 °C

ಚಿನ್ನದಾಟ; ಮುಂಬೈನಲ್ಲಿ ಇಳಿಕೆ- ದೆಹಲಿಯಲ್ಲಿ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ/ನವದೆಹಲಿ(ಪಿಟಿಐ): ಚಿನ್ನ ಧಾರಣೆಯಲ್ಲಿ ಮಂಗಳವಾರ ಏರಿಕೆ-ಇಳಿಕೆ ಎರಡೂ ಇದ್ದಿತು. ಮುಂಬೈನಲ್ಲಿ ಗಮನಾರ್ಹ ಮಟ್ಟದಲ್ಲಿ ಬೆಲೆ ಇಳಿದರೆ, ನವದೆಹಲಿಯಲ್ಲಿ ಸ್ವಲ್ಪ ಏರಿಕೆಯಾಯಿತು.

ಸೋಮವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ್ದ ಚಿನ್ನ ಮಂಗಳವಾರ ಮುಂಬೈನಲ್ಲಿ ಬೆಲೆ ಕಳೆದುಕೊಂಡಿತು. ಸ್ಟಾಂಡರ್ಡ್ ಚಿನ್ನ 10 ಗ್ರಾಂಗೆ ರೂ. 145ರಷ್ಟು ಇಳಿದು ರೂ. 32,355ರಲ್ಲಿ ಮಾರಾಟವಾಯಿತು. ಶುದ್ಧಚಿನ್ನ ರೂ. 140ರಷ್ಟು ಅಗ್ಗವಾಗಿ ರೂ. 32,500ಕ್ಕಿಳಿಯಿತು. ಬೆಳ್ಳಿಯೂ ರೂ. 220ರಷ್ಟು ಬೆಲೆ ಕಳೆದುಕೊಂಡು ಕೆ.ಜಿ.ಗೆ ರೂ. 64,130ಕ್ಕೆ ಬಂದಿತು.

ನವದೆಹಲಿಯಲ್ಲಿ ಮಾತ್ರ ಚಿನ್ನದ ಓಟ ಮುಂದುವರಿಯಿತು. 10 ಗ್ರಾಂ ಶುದ್ಧಚಿನ್ನ ರೂ. 25 ಬೆಲೆ ಹೆಚ್ಚಿಸಿಕೊಂಡು ರೂ.32,975ಕ್ಕೂ, ಸ್ಟಾಂಡರ್ಡ್ ಚಿನ್ನ ರೂ.32,775ಕ್ಕೂ  ಬಂದಿತು. ಆದರೆ, ಬೆಳ್ಳಿ ರೂ.200 ಅಗ್ಗವಾಗಿ ಕೆ.ಜಿ.ಗೆ ರೂ.63,000ರಂತೆ ಮಾರಾಟವಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.