ಚಿನ್ನದ ಧಾರಣೆ 4 ತಿಂಗಳ ಕನಿಷ್ಠ ಮಟ್ಟಕ್ಕೆ

7

ಚಿನ್ನದ ಧಾರಣೆ 4 ತಿಂಗಳ ಕನಿಷ್ಠ ಮಟ್ಟಕ್ಕೆ

Published:
Updated:

ಮುಂಬೈ(ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಶುಕ್ರವಾರ ಮತ್ತಷ್ಟು ಕುಸಿದಿದ್ದು, 4 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.ಇಲ್ಲಿ 10 ಗ್ರಾಂ ಸ್ಟಾಂಡರ್ಡ್ ಚಿನ್ನರೂ.230ರಷ್ಟು ಅಗ್ಗವಾಗಿರೂ.30,365ಕ್ಕೆ ತಗ್ಗಿತು(ಗುರುವಾರರೂ.30,595ರಷ್ಟಿ ದ್ದಿತು). ಅಪರಂಜಿ ಚಿನ್ನವೂರೂ.240 ರಷ್ಟು ಕಡಿಮೆಯಾಗಿರೂ.30,495ಕ್ಕೆ ಇಳಿಯಿತು. ಕೈಗಾರಿಕೆ ಬಳಕೆ ಬೇಡಿಕೆ ತಗ್ಗಿದ ಹಿನ್ನೆಲೆಯಲ್ಲಿ ಹಾಗೂ ಲಾಭ ಗಳಿಕೆ ಆಕಾಂಕ್ಷೆಯಿಂದ ಮಾರಾಟ ವಹಿವಾಟು ಒಂದು ಕೈ ಮುಂದಾಗಿದ್ದ ರಿಂದ ಬೆಳ್ಳಿ ಬೆಲೆಯೂ ಶುಕ್ರವಾರ ಒಮ್ಮೆಗೇರೂ.1,765ರಷ್ಟು ಅಗ್ಗವಾ ಯಿತು. ಕೆ.ಜಿ.ಗೆರೂ.57,830ರಲ್ಲಿ ವಹಿವಾಟು ನಡೆಸಿತು.ಜಾಗತಿಕ ಮಾರುಕಟ್ಟೆಯಲ್ಲಿ ಗುರು ವಾರ ಚಿನ್ನದ ಧಾರಣೆ ಭಾರಿ ಕುಸಿತ ಕಂಡಿದ್ದರ ಪರಿಣಾಮ ಭಾರತದ ಮಾರು ಕಟ್ಟೆ ಮೇಲೂ ಆಗಿದೆ ಎಂದು ಚಿನ್ನಾ ಭರಣ ವರ್ತಕರು, ಹೂಡಿಕೆದಾರರು ವಿಶ್ಲೇಷಿಸಿದ್ದಾರೆ.ದೆಹಲಿ: 6 ವಾರದಲ್ಲೇ ಕನಿಷ್ಠ

ನವದೆಹಲಿಯಲ್ಲಿ 10 ಗ್ರಾಂ ಚಿನ್ನರೂ.31,000 ಗಡಿಯಿಂದ ಕೆಳಕ್ಕಿಳಿ ಯಿತು. ಶುಕ್ರವಾರ ವಹಿವಾಟಿನಲ್ಲಿರೂ.330ರಷ್ಟು ಬೆಲೆ ಕಳೆದುಕೊಂಡು ಆರು ವಾರಗಳಲ್ಲಿ `ಕನಿಷ್ಠ ಬೆಲೆ' ಮಟ್ಟಕ್ಕೆ ಬಂದಿತು. 10 ಗ್ರಾಂ ಶುದ್ಧಚಿನ್ನರೂ.30,870ಕ್ಕೂ, ಸ್ಟಾಂಡರ್ಡ್ ಚಿನ್ನರೂ.30,670ಕ್ಕೂ ಬಂದು ನಿಂತಿತು.ಬೆಳ್ಳಿರೂ.1550 ಕುಸಿದು ಕೆ.ಜಿ.ಗೆರೂ.57,750ರಲ್ಲಿ ವಹಿವಾಟು ನಡೆಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry