ಚಿನ್ನದ ಪದಕ ವಿಜೇತ ರೋಷನ್‌ಗೆ ಸತ್ಕಾರ

ಮಂಗಳವಾರ, ಜೂಲೈ 23, 2019
25 °C

ಚಿನ್ನದ ಪದಕ ವಿಜೇತ ರೋಷನ್‌ಗೆ ಸತ್ಕಾರ

Published:
Updated:

ಬೆಳಗಾವಿ: ಗುಜರಾತಿನ ರಾಜಕೋಟದಲ್ಲಿ ಈಚೆಗೆ ನಡೆದ 29ನೇ ಸಬ್ ಜ್ಯೂನಿಯರ್ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ 3ನೇ ಗ್ರೂಪ್‌ನಲ್ಲಿ ನಾಲ್ಕು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪಕವನ್ನು ಗೆದ್ದುಕೊಂಡಿದ್ದ ಬೆಳಗಾವಿಯ ಸೇಂಟ್ ಪೌಲ್ ಹೈಸ್ಕೂಲ್ ವಿದ್ಯಾರ್ಥಿ ರೋಷನ್ ಉದಯ ಅವರನ್ನು ನಗರದ ರೋಟರಿ ಕಾರ್ಪೊರೇಶನ್ ಸ್ಪೋರ್ಟ್ಸ್ ಅಕಾಡೆಮಿಯ ಈಜುಗೊಳದಲ್ಲಿ ಸತ್ಕರಿಸಲಾಯಿತು.ಬೆಳಗಾವಿ ಸ್ವಿಮ್ಮರ್ಸ್‌ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಈಜುಪಟುವಾದ ರೋಷನ್ ಉದಯ ಅವರನ್ನು ಸಾಮಾಜಿಕ ಕಾರ್ಯಕರ್ತೆ ಹಾಗೂ ಸ್ವಿಮ್ಮರ್ಸ್‌ ಕ್ಲಬ್ ಬೆಳಗಾವಿಯ ಅಧ್ಯಕ್ಷೆ ಲತಾ ಕಿತ್ತೂರ ಸತ್ಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಲತಾ ಕಿತ್ತೂರ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ರೋಷನ್ ಅವರ ಸ್ಫೂರ್ತಿ ಹಾಗೂ ಆತ್ಮಸ್ಥೈರ್ಯವನ್ನು ಶ್ಲಾಘಿಸಿದರು.ಕರ್ನಾಟಕವನ್ನು ಪ್ರತಿನಿಧಿಸಿದ್ದ ರೋಷನ್ ಅವರು 50 ಮೀಟರ್ ಬ್ರೆಸ್ಟ್ ಸ್ಟ್ರೋಕ್, 100 ಮೀ. ಬ್ರೆಸ್ಟ್ ಸ್ಟ್ರೋಕ್, 50 ಮೀ. ಫ್ರೀ ಸ್ಟ್ರೈಲ್ ಹಾಗೂ 4x50 ಮೀ. ಮೆಡಲೆ ರಿಲೆ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಹಾಗೂ 4x50 ಮೀ. ಫ್ರೀ ಸ್ಟ್ರೈಲ್ ರಿಲೆ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.ಉಮೇಶ ಕಲಘಟಗಿ, ಪ್ರಸಾದ ತೆಂಡೂಲ್ಕರ, ಮಧುಕರ ಬಾಗೇವಾಡಿ, ತರಬೇತುದಾರರಾದ ಅಜಿಂಕ್ಯ ಮೆಂಡಕೆ, ಅಕ್ಷಯ ಶೆರೆಗಾರ, ಅಂಕುಶ ಕಣಬರಕರ, ರಾಘವೇಂದ್ರ ಅಣ್ವೇಕರ, ರಾಜೇಶ ಶಿಂಧೆ ಹಾಗೂ ರೋಷನ್ ಅವರ ತಂದೆ ಉದಯ ಶಂಕರ ಹಾಗೂ ತಾಯಿ ನಿಷಾ ಅವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry