ಚಿನ್ನದ ಬೆಲೆ 5ದಿನಗಳಲ್ಲಿ ರೂ 1225 ಕುಸಿತ

7

ಚಿನ್ನದ ಬೆಲೆ 5ದಿನಗಳಲ್ಲಿ ರೂ 1225 ಕುಸಿತ

Published:
Updated:

ವದೆಹಲಿ (ಪಿಟಿಐ): ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದ್ದು ಶನಿವಾರ ಇಲ್ಲಿ  ಮತ್ತೆ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಧಾರಣೆ ರೂ270 ಕುಸಿದು ರೂ31,830 ರಷ್ಟಾಗಿದೆ. ಬೆಳ್ಳಿ ಬೆಲೆ ಕೆ.ಜಿಗೆ ರೂ250 ಹೆಚ್ಚಿದ್ದು ರೂ63,050ತಲುಪಿದೆ. 

ಮುಂಬೈ ವರದಿ: ಸ್ಟಾಂಡರ್ಡ್ ಚಿನ್ನದ ಬೆಲೆ 10 ಗ್ರಾಂಗಳಿಗೆ ಶನಿವಾರ ಇಲ್ಲಿ ರೂ200 ಇಳಿಕೆ ಕಂಡಿದ್ದು        ರೂ31,275ರಷ್ಟಾಗಿದೆ. ಬೆಳ್ಳಿ ಬೆಲೆ ಕೆ.ಜಿಗೆ ರೂ830 ಕುಸಿದಿದ್ದು, ರೂ62,735 ರಷ್ಟಾಗಿದೆ.

ಕಳೆದ ಎರಡು ದಿನಗಳಲ್ಲಿ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗಳಿಗೆ ರೂ800 ಕುಸಿತ ಕಂಡರೆ ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ರೂ1,225      ಇಳಿಕೆಯಾಗಿದೆ.

`ಕಳ್ಳಸಾಗಾಣಿಕೆ~

ಮುಂಬೈ (ಪಿಟಿಐ):ಚಿನ್ನದ ಆಮದಿನ ಮೇಲೆ ನಿರ್ಬಂಧ ವಿಧಿಸಿದರೆ ಅಕ್ರಮ ವಹಿವಾಟು ಮತ್ತು ಕಳ್ಳಸಾಗಾಣಿಕೆ ಹೆಚ್ಚಲಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry